ಕೃಷಿ ಕೆಲಸ ಮಾಡಿಕೊಂಡಿದ್ದ ಯಲ್ಲಾಪುರ ಹೊಸಳ್ಳಿಯ ವಿಠ್ಠು ಪಾಂಡ್ರಮೀಸೆ ಮೇಲೆ ಮೂವರು ಆಗಂತುಕರು ದಾಳಿ ನಡೆಸಿದ್ದಾರೆ. ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಹೊಸಳ್ಳಿ ಖಾರೆವಾಡದ ವಿಠ್ಠು ಪಾಂಡ್ರಮೀಸೆ (51) ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಮಾರ್ಚ 5ರಂದು ಅವರು ತಮ್ಮ ಜಮೀನಿನಲ್ಲಿರುವಾಗ ಮೂವರು ಅಲ್ಲಿಗೆ ಆಗಮಿಸಿದರು. ಅದೇ ಊರಿನ ತುಕಾರಾಮ ಮಿಸಳ, ವಿಠ್ಠಲ ಕಾತ್ರೋಟ ಹಾಗೂ ನವಿಲು ಮಿಸಳೆ ಅಲ್ಲಿಗೆ ಬಂದವರಾಗಿದ್ದು, ಜಮೀನಿನಲ್ಲಿ ವಿದ್ಯುತ್ ತಂತಿ ಹಾದು ಹೋದ ವಿಷಯವಾಗಿ ಮಾತನಾಡಿದರು.
ಈ ವಿಷಯವಾಗಿ ವಿಠ್ಠು ಪಾಂಡ್ರಮೀಸೆ ಹಾಗೂ ಆ ಮೂವರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ತುಕಾರಾಮ ಮಿಸಳ ಅವರು ವಿಠ್ಠು ಪಾಂಡ್ರಮೀಸೆ ಮೇಲೆ ಮೊದಲು ಕೈ ಮಾಡಿದರು. ನಂತರ ಉಳಿದಿಬ್ಬರು ಸೇರಿ ಅವರ ಕೈಯನ್ನು ಹಗ್ಗದಿಂದ ಕಟ್ಟಿದರು. ಎಲ್ಲರೂ ಸೇರಿ ಥಳಿಸಿದ ನಂತರ `ಮತ್ತೆ ಸಿಕ್ಕರೆ ಕೊಂದು ಬಿಡುವೆ’ ಎಂದು ಬೆದರಿಸಿದರು.
ಈ ಎಲ್ಲಾ ವಿಷಯದ ಬಗ್ಗೆ ವಿಠ್ಠು ಪಾಂಡ್ರಮೀಸೆ ಯಲ್ಲಾಪುರಕ್ಕೆ ಬಂದು ಪೊಲೀಸರಿಗೆ ಹೇಳಿದರು. ಪೊಲೀಸರು ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡರು.