ಹೊನ್ನಾವರ: ದೇವರಗದ್ದೆ ಹೊನ್ನಾವರ ಶರತ್ ಖಾರ್ವಿ ಎಂಬಾತರು ಅರಬ್ಬಿ ಸಮುದ್ರದಲ್ಲಿ ಅಡ್ಡಾದಿಡ್ಡಿ ಬೋಟು ಚಲಾಯಿಸಿ ಬೋಟಿನ ದಂಡೆ ಮೇಲೆ ಕುಳಿತಿದ್ದ ನಾರಾಯಣ ಖಾರ್ವಿ ಎಂಬಾತರನ್ನು ಕೆಳಗೆ ಬೀಳಿಸಿದ್ದಾರೆ.
ಮಂಕಿ ದೇವರಗದ್ದೆಯ ಶರತ್ ಖಾರ್ವಿ ಮೀನುಗಾರಿಕೆ ನಡೆಸುವ ಯಾಂತ್ರಿಕೃತ ಬೋಟಿನ ಚಾಲಕ. ಈತ ಅಗಸ್ಟ 20ರಂದು ಮೀನುಗಾರರನ್ನು ಬೋಟಿನ ಮೂಲಕ ಕರೆದುಕೊಂಡು ಅರಬ್ಬಿ ಸಮುದ್ರಕ್ಕೆ ಹೋಗಿದ್ದ. ಅಲೆಗಳ ಅಬ್ಬರ ಜೋರಾಗಿದ್ದರೂ ಆತ ಸಮುದ್ರದಲ್ಲಿ ಮುನ್ನುಗ್ಗುತ್ತಿದ್ದ. ಬೋಟಿನ ಒಳಗಿದ್ದ ಮೀನುಗಾರರು ಇದರಿಂದ ಆತಂಕಕ್ಕೆ ಒಳಗಾಗಿದ್ದರು.
ಶರತ್ ಖಾರ್ವಿ ಬೋಟನ್ನು ಅಡ್ಡಾದಿಡ್ಡಿ ಚಲಾಯಿಸಿದ ಕಾರಣ ನಾರಾಯಣ ಖಾರ್ವಿ ಎಂಬಾತ ಬೋಡಿನಿಂದ ಕೆಳಗೆ ಬಿದ್ದಿದ್ದು, ಆಗ ಬೋಟಿನ ಘೋರ್ ಭಾಗ ನಾರಾಯಣ ಖಾರ್ವಿಯ ಮಂಡಿಗೆ ಬಡಿದಿದೆ. ಇದರಿಂದ ಕಾಲಿಗೆ ಗಂಭೀರವಾಗಿ ಪೆಟ್ಟಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೂ ಈ ನೋವು ವಾಸಿಯಾಗಿಲ್ಲ. ಮೂರು ದಿನದ ನಂತರ ವೈದ್ಯರು ಆಪರೇಶನ್ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ.
ಬೋಟಿನಿoದ ಬಿದ್ದು ಗಾಯಗೊಂಡಿರುವ ನಾರಾಯಣ ಖಾರ್ವಿ ಅವರು ಮೊದಲಿನಿಂದ ಓಡಾಡುವಂತಾಗಲು ಇನ್ನೊಂದು ಆರಪೇಶನ್ ಅಗತ್ಯವಿರುವ ಬಗ್ಗೆ ವೈದ್ಯರು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗೆ ಬೋಟನ್ನು ಅಡ್ಡಾದಿಡ್ಡಿ ಓಡಿಸಿದ ಚಾಲಕನೇ ಕಾರಣ ಎಂಬುದು ನಾರಾಯಣ ಖಾರ್ವಿ ಅವರ ಸಂಬAಧಿಕರ ದೂರು.