ಕಾರವಾರ: 2024ನೇ ಸಾಲಿನ ಅಗಸ್ಟ ತಿಂಗಳಿನಲ್ಲಿ ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕಾರವಾರದ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಕಂಪ್ಯೂಟರ್ ಆಫೀಸ್ ಅಟೊಮೇಷನ್ ವಿಭಾಗದಲ್ಲಿ ಅಜ್ಜಯ್ಯ ಶಿವರುದ್ರಯ್ಯ ಹಿರೇಮಠ, ಸಂಜಯ ಕುಶಾಲಿ ಮಾಸ್ಕರ, ದರ್ಶನ ಶೇಖರ ಕಟ್ಟಿಮನಿ, ಪ್ರಥಮ ಪ್ರಭಾಚಂದ್ರ ಗಿರಫ್, ಕೃತಿಕ ನಾರಾಯಣ ಸಾಳಸ್ಕರ, ಕೃಪೇಕ್ಷಿತಾ ಕೆ ಸೈಲ್, ಹೇಮಾವತಿ ರಮೇಶ ಅಂಬಿಗ, ನಿಷಾ ದತ್ತಾತ್ರಯ ಕಿಂದಳಕರ, ಜಾಸ್ಮಿನಿ ದತ್ತಾ ಗೌಡಾ ಅತ್ಯುನ್ನತ ದರ್ಜೆಯಲ್ಲಿ ಪಾಸಾಗಿದ್ದಾರೆ. ಇದರೊಂದಿಗೆ ಮಿಸ್ಬಾ ಅಬ್ದುಲ್ ಮಜೀದ ಠಾಕೂರ, ಮಾರಿಯಾ ಇರ್ಫಾನ ಬನಾವಸಿಕರ, ಅನುಷಾ ಅಶೋಕ ಗೊವೇಕರ, ಸ್ನೇಹಲ ಸತೀಶ ಬಾಡಕ್ಕರ ಸಹ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸಂಸ್ಥೆಯ ಆರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಸಾಧನೆ ಮಾಡಿದ್ದಾರೆ.
ಇನ್ನೂ ಕಂಪ್ಯೂಟರ್ ಗ್ರಾಫಿಕ್ ಡಿಸೈನರ್ ವಿಭಾಗದಲ್ಲಿ ನಾವಿನ್ಯಾ ನವೀನ್ ಶೇಟ, ಕುಮಾರಿ ಸಿಯೋನಾ ಸಾವೆರ್ ಫರ್ನಾಂಡೆಸ್ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 2 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಚಾರ್ಯ ಪ್ರಸನ್ನ ತೆಂಡೂಲ್ಕರ ಹಾರೈಸಿದರು.