ಸಾರ್ವಜನಿಕರಿಗೆ ನೀಡುವ ಪ್ರಮಾಣ ಪತ್ರಗಳ ವಿಷಯವಾಗಿ ಇಬ್ಬರು ಅಧಿಕಾರಿಗಳ ನಡುವೆ ಹೊಡೆದಾಟ ನಡೆದಿದೆ. ಜಮಾಯಿಸಿದ ಜನರ ನಡುವೆಯೇ ಅಧಿಕಾರಿಗಳು ಹೊಡೆದಾಡಿಕೊಂಡಿದ್ದಾರೆ.
ಮಂಗಳವಾರ ಮುಂಡಗೋಡು ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ರಜಪೂತ ಎಂಬಾತರು ಅದೇ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಉಪತಹಶಿಒಲ್ದಾರ್ ಜಿ ಬಿ ಭಟ್ ಅವರ ಮೇಲೆ ಮೊದಲು ಕೈ ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ಹಲವು ಬಗೆಯ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡುವುದು ಬಾಕಿಯಿದ್ದು, ಈ ಪ್ರಮಾಣ ಪತ್ರಗಳ ವಿತರಣೆಗೂ ಮುನ್ನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನೀರಿಕ್ಷಕರು ದಾಖಲೆಗಳ ಪರಿಶೀಲಿಸುವುದು ಕಡ್ಡಾಯ. ಪರಿಶೀಲನೆ ನಂತರ ತಹಶೀಲ್ದಾರರಿಗೆ ವರದಿ ಒಪ್ಪಿಸುವುದು ಅಧೀನ ಅಧಿಕಾರಿಗಳ ಜವಾಬ್ದಾರಿ. ಆದರೆ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ರಜಪೂತ್ ಸರಿಯಾಗಿ ಪರಿಶೀಲನಾ ವರದಿ ನೀಡದ ಬಗ್ಗೆ ಉಪತಹಸೀಲ್ದಾರ್ ಜಿ ಬಿ ಭಟ್ಟ ಕಂದಾಯ ನೀರಿಕ್ಷಕರಿಗೆ ಪೊನ್ ಮಾಡಿದ್ದು ಹೊಡೆದಾಟಕ್ಕೆ ಕಾರಣ!
‘ವರದಿಯನ್ನು ಸರಿಯಾಗಿ ನೀಡುತ್ತಿಲ್ಲ ಯಾಕೆ?’ ಎಂದು ಉಪತಹಶೀಲ್ದಾರ್ ಜಿ ಬಿ ಭಟ್ಟ ಪೋನ್ ಮಾಡಿದಾಗ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ಕೆಟ್ಟದಾಗಿ ಬೈದಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ಸಿಟ್ಟಿನಲ್ಲಿ ತಹಶೀಲ್ದಾರ್ ಕಚೇರಿಗೆ ಬಂದ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ಉಪತಹಸೀಲ್ದಾರ್ ಜಿ ಬಿ ಭಟ್ಗೆ ಹೊಡೆದಿದ್ದು, ಜಿ ಬಿ ಭಟ್ಟ ಸಹ ಪ್ರತಿ ದಾಳಿ ನಡೆಸಿದ್ದಾರೆ.
ಈ ವೇಳೆ ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ಹೊಡೆದಾಟ ಬಿಡಿಸಿದ್ದಾರೆ. ಅಧಿಕಾರಿಗಳ ಹೊಡೆದಾಟದ ಮಾಡಿಕೊಂಡ ನಂತರ ಕಚೇರಿಯಲ್ಲಿ ರಾಜಿ-ಸಂಧಾನ ಪ್ರಯತ್ನ ನಡೆದಿದೆ.