ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಮುಂದುವರೆದಿದ್ದು, ಮುಂಡಗೋಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಆನೆ ದಾಳಿ ನಡೆದಿದೆ.
ಕಾತೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳಿಗೂ ಆನೆ ದಾಳಿ ಮಾಡಿದೆ. ಸಿಂಗನಹಳ್ಳಿ, ಹುಲಿಹೊಂಡ ಗ್ರಾಮದಲ್ಲಿ ಆನೆಗಳ ತಂಡ ಬೀಡುಬಿಟ್ಟಿದೆ. ಕಳೆದ ಕೆಲವು ದಿನಗಳಿಂದ ಆನೆಗಳು ಮುಂಡಗೋಡ ಭಾಗದಲ್ಲಿ ಓಡಾಟ ನಡೆಸಿಕೊಂಡು ಇದ್ದವು. ಆದರೆ ಭಾನುವಾರ ಸಿಂಗನಹಳ್ಳಿ ಹುಲಿಹೊಂಡ ಗ್ರಾಮಕ್ಕೆ ಆಗಮಿಸಿದ ಮೂರು ಆನೆಗಳು ಅಲ್ಲಿನ ಫಸಲು ನಾಶ ಮಾಡಿದವು. ರೈತರು ಬೆಳೆದಿದ್ದ ಗೋವಿನ ಜೋಳಗಳು ಆನೆಗಳಿಗೆ ಆಹಾರವಾದವು.
ಪ್ರತಿ ವರ್ಷವೂ ಈ ಭಾಗದಲ್ಲಿ ಆನೆ ದಾಳಿ ನಡೆಯುತ್ತಿದೆ. ದಾಂಡೇಲಿ- ಹಳಿಯಾಳ- ಕಿರವತ್ತಿ- ಕಾತೂರು ಆನೆ ಕಾಡಿದಾರ್ ಪ್ರದೇಶವಾಗಿದೆ. ಈ ಮಾರ್ಗದಲ್ಲಿ ಅವುಗಳು ಸಂಚರಿಸುತ್ತವೆ. ಕೆಲವು ಭಾಗದಲ್ಲಿ ಅವರು ಬೆಳೆಗಳನ್ನು ಹಾನಿ ಮಾಡುವುದು ಸಾಮಾನ್ಯ ಎಂಬoತಾಗಿದೆ. ಸದ್ಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.