ಕುಮಟಾ: ಅರಣ್ಯವಾಸಿಗಳ ಮೇಲೆ ಅಧಿಕಾರಿಗಳ ದಬ್ಬಾಳಿಕೆ ಕುರಿತು ಎಲ್ಲಡೆ ನಿರಂತರ ದೂರು ಬರುತ್ತಿದ್ದು, ಸಾಗುವಳಿ ಕ್ಷೇತ್ರದಲ್ಲಿರುವವರನ್ನು ಒಕ್ಕಲೆಬ್ಬಿಸುವ ಬಗ್ಗೆ ಅಧಿಕಾರಿಗಳ ನಿರ್ಣಯದ ಬಗ್ಗೆ ಸಮಕ್ಷೇಮದಲ್ಲಿ ಚರ್ಚೆ ನಡೆದಿದೆ.
ಮಂಗಳವಾರ ಕುಮಟಾ ಅರಣ್ಯ ಸಹಾಯಕ ಸಂರಕ್ಷಣಾ ಅಧಿಕಾರಿ ಕಛೇರಿ ಆವರಣದಲ್ಲಿ ಅರಣ್ಯ ಸಹಾಯಕ ಅಧಿಕಾರಿಗಳು ಲೋಕೇಶ ಅವರನ್ನು ಅರಣ್ಯವಾಸಿಗಳು ಹಾಗೂ ಹೋರಾಟಗಾರ ರವೀಂದ್ರ ನಾಯ್ಕ ಹಲವು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಪುನರ್ ಪರಿಶೀಲನಾ ಹಂತದಲ್ಲಿ ಇರುವ, ಜಿಫಿಎಸ್ ಮೇಲ್ಮನವಿ ಉರ್ಜಿತ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂದಿಗಳಿAದ ಆತಂಕ ಉಂಟಾಗುವ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಲಿಖಿತ ಉತ್ತರ ನೀಡಲು ಅರಣ್ಯವಾಸಿಗಳು ಪಟ್ಟು ಹಿಡಿದರು. ಈ ಹಿನ್ನಲೆಯಲ್ಲಿ ಹೊನ್ನಾವರ ಡಿ.ಎಫ್.ಒ ಯೋಗೇಶ ಅವರು ಒಂದು ವಾರದಲ್ಲಿ ಲಿಖಿತ ಉತ್ತರ ನೀಡುವ ಭರವಸೆ ನೀಡಿದರು.
ಈ ಸಭೆಯಲ್ಲಿ ಅರಣ್ಯ ಅಧಿಕಾರಿಗಳಾದ ವಲಯ ಅರಣ್ಯ ಅಧಿಕಾರಿಗಳಾದ ವಿನೋದ ನಾಯ್ಕ, ಪ್ರೀತಿ ನಾಯ್ಕ, ರಾಜೀವ ನಾಯಕ ಉಪಸ್ಥಿತರಿದ್ದರು. ತಾಲೂಕಾದ್ಯಂತ ಸೇರಿದ ಬೃಹತ್ ಅರಣ್ಯವಾಸಿಗಳ ಸಭೆಯಲ್ಲಿ ರಂಜಿತಾ ರವೀಂದ್ರ, ಗಜಾನನ ಹೆಗಡೆ, ಯಾಕುಬ ಸಾಬ, ಮಹೇಂದ್ರ ನಾಯ್ಕ ಕತಗಾಲ, ರೈತ ಹೋರಾಟಗಾರ ಮುಖಂಡ ವೀರಭದ್ರ ನಾಯ್ಕ, ರಾಘವೇಂದ್ರ ಕಂವಚೂರು, ಶುಕುರ್ ಸಾಬ, ಸೀತರಾಮ ನಾಯ್ಕ ಬುಗರಿಬೈಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಅಬ್ದುಲ್ ಶುಕುರ್, ಸದಾನಂದ ಹರಿಕಾಂತ, ಜಗದೀಶ ನಾಯ್ಕ, ಅರವೀಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
`ಅತಿಕ್ರಮಣದಾರರು ಗಂಡಸರು ಮನೆಯಲ್ಲಿ ಇಲ್ಲದಿದ್ದಾಗ ಬೇಲಿ ಕೀಳುವುದು, ಗಿಡ ಕಿತ್ತುವ ಕಾರ್ಯ ಮಾಡುತ್ತಾರೆ. ನೋಟೀಸ್ ಕೊಡುವುದಿಲ್ಲ. ಮನೆಯಲ್ಲಿ ಹೆಂಗಸರು ಮಾತ್ರ ಇದ್ದಾಗ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂದು ರಂಜಿತಾ ರವೀಂದ್ರ ದೂರಿದರು.