ನನಗಿದು ಅನಿರೀಕ್ಷಿತ ಆಶೀರ್ವಾದ. ಬೆಳ್ಳಂಬೆಳಿಗ್ಗೆ ಹಳ್ಳಿಯೊಂದನ್ನು ಸುತ್ತಬೇಕೆಂದು ಆಸೆ ಪಟ್ಟವನು ತಲುಪಿದ್ದು ಇದೊಂದು ಕಟ್ಟಡದ ಮುಂದೆ. ಮಂಜಿನ ಹಬೆ ಏಳುತ್ತಿದ್ದ ಕೆರೆಗೆ ಮುಖ ಮಾಡಿ ಇತ್ತೀಚೆಗಷ್ಟೇ ನಿರ್ಮಾಣವಾದ ಹಳೆಯ ಮಾದರಿಯ ಕಟ್ಟಡ ಅದು. ನಾನಿಂದು 5 ಗಂಟೆಗೆ ಎದ್ದು ಹೋಗಿದ್ದೆ. ಎಲ್ಲಿಗೆ ಹೋಗಬೇಕೆಂದು ಸ್ಥಿರವಿರಲಿಲ್ಲ. ಮತ್ತೆಲ್ಲೋ ತಲುಪಿದೆ. ಹಗಲು ಮೂಡಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅದಮಾರು ಕಿರಿಯ ಶ್ರೀಗಳು ಆ ಪರಿಸರಕ್ಕೆ ಬಂದಿದ್ದರು. ಅವರೊಂದಿಗೆ ಕಲಾವಿದ ಪುರುಷೋತ್ತಮ ಅಡ್ವೆಯವರೂ ಇದ್ದರು. ಅಲ್ಲಿ ಕಂಡಿದ್ದು ಈ ಕಟ್ಟಡ. ಇಂತಹ ಮನೆಗಳು ದಾರಿ ತಪ್ಪಿದಾಗಲೇ ಸಿಕ್ಕರೆ ಚಂದ. ಕರಾವಳಿಯಲ್ಲಿರುವ ಮನೆಗಳ ಸೌಂದರ್ಯ, ವಿನ್ಯಾಸ, ಕಲ್ಪನೆಗಳು ಕರಾವಳಿಯ ಚೆಲುವಿನ ಅಜ್ಞಾತ ಆಸ್ತಿ. ಹಳೆಯ ಕಾಲ ಹೇಗಿದ್ದರಬಹುದೆಂಬ ನೆನಕೆಗಾಗಿ ಈ ಚಿತ್ರ.
ಮಂಜುನಾಥ ಕಾಮತ್, ಉಡುಪಿ