ಯಲ್ಲಾಪುರ: ಮಾದೇವಕೊಪ್ಪದಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಿದ ಬೈಕನ್ನು ಕಳ್ಳರು ಅಪಹರಿಸಿದ್ದಾರೆ.
ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಬೆಂಡು ಜನ್ನು ಪಾಂಡ್ರಮೀಸೆ (24) ಬೈಕ್ ಕಳೆದುಕೊಂಡಿದ್ದಾರೆ. ಅಕ್ಟೊಬರ್ 29ರ ರಾತ್ರಿ ಅವರು ತಮ್ಮ ಮನೆ ಅಂಗಳದಲ್ಲಿ ಬೈಕ್ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 6.30ಕ್ಕೆ ಎದ್ದು ನೋಡಿದಾಗ ಅಲ್ಲಿ ಬೈಕ್ ಇರಲಿಲ್ಲ.
ಎಲ್ಲಾ ಕಡೆ ಹುಡುಕಿದರೂ ಅವರಿಗೆ ಈವರೆಗೂ ಬೈಕ್ ಸಿಕ್ಕಿಲ್ಲ. 30 ಸಾವಿರ ರೂ ಮೌಲ್ಯದ ಕಪ್ಪು ಬಣ್ಣದ ಹೀರೋ ಸ್ಪಾಂಡ್ಲರ್ ಪ್ಲಸ್ ಬೈಕ್ ಕಳ್ಳರನ್ನು ಹುಡುಕಿ. ತನ್ನ ಬೈಕ್ ಮರಳಿಸಿ’ ಎಂದು ಅವರು ಪೊಲೀಸ್ ದೂರು ನೀಡಿದ್ದಾರೆ.
#S News Digitel Advertisement: ಅಪರಾಧ ತಡೆಗೆ ಸಿಸಿ ಕ್ಯಾಮರಾ ಸಹಕಾರಿ. ಕ್ಯಾಮರಾ ಸೇವೆಗೆ ಇಲ್ಲಿ ಫೋನ್ ಮಾಡಿ: N G Computer: 9448325823