ಕಾರವಾರ: `ಈ ನಾಡಿನ ವೃಕ್ಷ ಜ್ಞಾನ ಸಂಪತ್ತು ತುಳಸಿ ಗೌಡ ಅವರ ನಿಧನದಿಂದ ನೋವಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಅವರು ಹೇಳಿದ್ದಾರೆ. `ಅವರ ನಿಧನದಿಂದ ನಾಡಿನ ಅಮೂಲ್ಯವಾದ ರತ್ನವೊಂದು ಕಳಚಿದ ಹಾಗಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
`ತುಳಸಿ ಗೌಡ ಅವರು ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದರು. ಎಲ್ಲರ ಜೊತೆ ಪ್ರೀತಿಯಿಂದ ಬರೆಯುತ್ತಿದ್ದರು. ಅವಮಾನ ಆದಾಗ ಅವರು ಕುಗ್ಗಿರಲಿಲ್ಲ. ಪದ್ಮಶ್ರೀ ಪ್ರಶಸ್ತಿ ಬಂದರೂ ಸಹ ಅವರು ಒಂಚೂರು ಹಿಗ್ಗಿರಲಿಲ್ಲ. ಅವರ ಸೇವೆ ಸದಾ ಸ್ಮರಣೀಯ’ ಎಂದು ರಾಜಾ ನಾಯ್ಕ ಅವರು ಹೇಳಿದ್ದಾರೆ.
`ತುಳಸಿ ಗೌಡ ಅವರು ಅನಾರೊಗ್ಯಕ್ಕೆ ಒಳಗಾದಾಗ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೆ. ಆದರೆ, ಅವರು ಇನ್ನಿಲ್ಲ ಎಂಬ ವಿಷಯ ತಿಳಿದು ನೋವಾಯಿತು. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಬರಲಿ’ ಎಂದು ಹವ್ಯಾಸಿ ವರದಿಗಾರರು ಆಗಿರುವ ರಾಜಾ ನಾಯ್ಕ ಅವರು ಪ್ರಾರ್ಥಿಸಿದ್ದಾರೆ.