ಹಳಿಯಾಳ: `ಪ್ರತ್ಯೇಕ ಜಿಲ್ಲೆ ರಜನೆಗೆ ತನ್ನ ತಕರಾರು ಇಲ್ಲ’ ಎಂದು ಶಾಸಕ ಆರ್ ವಿ ದೇಶಪಾಂಡೆ ಎರಡು ವಾರದ ಹಿಂದೆ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೆ ಪ್ರತ್ಯೇಕ ಜಿಲ್ಲೆ ರಚನೆ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.
ಕದಂಬ ಕನ್ನಡ ಜಿಲ್ಲೆ ರಚನೆಗಾಗಿ ಪ್ರಯತ್ನಿಸುತ್ತಿರುವ ಅನಂತಮೂರ್ತಿ ಹೆಗಡೆ ಅವರು ಭಾನುವಾರ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರನ್ನು ಭೇಟಿ ಮಾಡಿದರು. ಘಟ್ಟದ ಮೇಲಿನ 7 ತಾಲೂಕು ಸೇರಿ ಪ್ರತ್ಯೇಕ ಜಿಲ್ಲೆ ರಚಿಸುವ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸುವಂತೆ ಅವರು ಕೇಳಿಕೊಂಡರು. ಜೊತೆಗೆ `ತಮ್ಮ ಹೋರಾಟಕ್ಕೂ ಬೆಂಬಲ ನೀಡಿ’ ಎಂದು ಮನವಿ ಮಾಡಿದರು.
ಪ್ರಮುಖರಾದ ವಿ ಎಂ ಭಟ್ಟ, ಜಿ ಎಸ್ ಹೆಗಡೆ ಹಲಸರಿಗೆ, ಶಿವಾನಂದ ದೇಶಳ್ಳಿ, ನಾಗರಾಜ ಜೋಶಿ ಸೋಂದ, ಸಂತೋಷ ನಾಯ್ಕ ಬ್ಯಾಗದ್ದೆ ಇದ್ದರು.