ಅಂಕೋಲಾದ ಕಂಚಿನಬಾಗಿಲು ಬಳಿ ಕಾರು ಪಲ್ಟಿಯಾಗಿದೆ. ಕಾರು ಕಂದಕಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಕಾರವಾರದ ಸಂಬoಧಿಕರ ಮನೆಯಲ್ಲಿ ತಿಥಿಯಿದ್ದ ಕಾರಣ ಹುಬ್ಬಳ್ಳಿಯ ನಾಲ್ವರು ಆಗಮಿಸಿದ್ದರು. ತಿಥಿ ಮುಗಿಸಿ ಮರಳಿ ಹುಬ್ಬಳ್ಳಿಗೆ ತೆರಳುವ ವೇಳೆ ಕಂಚಿನಬಾಗಿಲು ಬಳಿ ಕಾರು ಅಪಘಾತವಾಯಿತು.
ರಸ್ತೆಯ ತಿರುವಿನಲ್ಲಿ ಕಾರಿಗೆ ಅಡ್ಡಲಾಗಿ ಆಕಳು ಬಂದಿದ್ದು, ಆಕಳಿಗೆ ಗುದ್ದುವುದನ್ನು ತಪ್ಪಿಸಲು ಚಾಲಕ ಏಕಾಏಕಿ ಕಾರು ತಿರುಗಿಸಿದಾಗ ಅದು ಕಂದಕಕ್ಕೆ ಬಿದ್ದಿತು. ಅಪಘಾತ ನೋಡಿದ ಸ್ಥಳೀಯರು ತಕ್ಷಣ ಗಾಯಾಳುಗಳ ರಕ್ಷಣೆಗೆ ಬಂದರು.
ಮೂವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಗಂಭೀರ ಗಾಯಗೊಂಡಿದ್ದ ವೃದ್ಧರೊಬ್ಬರು ಅಲ್ಲಿಯೇ ಸಾವನಪ್ಪಿದರು. ಸಕಾಲದಲ್ಲಿ ಆಂಬುಲೆನ್ಸ ಸಿಗದ ಕಾರಣ ಸಾವಾದ ಬಗ್ಗೆಯೂ ಸ್ಥಳೀಯರು ದೂರಿದ್ದಾರೆ.