ಶಿರಸಿ: ಹೊಟ್ಟೆನೋವಿನ ಕಾರಣ ಕೆಲಸಕ್ಕೆ ಹೋಗದ ಮಂಜುನಾಥ ಮಡಿವಾಳ ಎಂಬಾತ ನೇಣಿಗೆ ಶರಣಾಗಿದ್ದಾನೆ.
ಕರೂರು ಅಜ್ಜಿಬೇಳದ ಮಂಜುನಾಥ ವೆಂಕಟೇಶ ಮಡಿವಾಳ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ. ಮದ್ಯ ಸೇವನೆ ಕಾರಣದಿಂದ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ ಒಂದು ತಿಂಗಳಿನಿ0ದ ಆತ ಎಲ್ಲಿಯೂ ಕೆಲಸಕ್ಕೆ ಹೋಗಿರಲಿಲ್ಲ. ಮನೆಯಲ್ಲಿಯೇ ಇದ್ದ ಮಂಜುನಾಥ ಸೆ 28ರಂದು ಮನೆಯಿಂದ ಕಾಣೆಯಾಗಿದ್ದು, ಸೆ 29ರ ಬೆಳಗ್ಗೆ ಕರೂರಿನ ಪ್ರಶಾಂತ ಹೆಗಡೆ ಅವರ ಸೊಪ್ಪಿನ ಬೆಟ್ಟದಲ್ಲಿ ಸಾವನಪ್ಪಿದ್ದಾನೆ. ಅಲ್ಲಿದ್ದ ಕವಲು ಮರದ ಟೊಂಗೆಗೆ ಆತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.