ಹಲವು ದಶಕಗಳ ಕಾಲ ಉತ್ತರ ಕನ್ನಡ ಜಿಲ್ಲೆಯನ್ನು ಆಳಿದ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಇದೀಗ 78 ವರ್ಷ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮವೇ ಅವರ ಆರೋಗ್ಯದ ಗುಟ್ಟು!
ರಾತ್ರಿ ಬೇಗ ಮಲಗುವ ಆರ್ ವಿ ದೇಶಪಾಂಡೆ ಬೆಳಗ್ಗೆ ಬೇಗ ಏಳುತ್ತಾರೆ. ಭಗವಂತನ ಆರಾಧನೆ, ತಾಸುಗಳ ಕಾಲದ ಪೂಜೆ ನೆರವೇರಿಸದೇ ಅವರು ಮನೆಯಿಂದ ಹೊರಬಿದ್ದ ಉದಾಹರಣೆಗಳಿಲ್ಲ. ಆಳವಾದ ಅಧ್ಯಯನ, ಅಗಾಧವಾದ ಜ್ಞಾನದ ಜೊತೆ ದಶಕದ ಹಿಂದಿನ ವಿದ್ಯಮಾನಗಳನ್ನು ಕಣ್ಣಿಗೆ ಕಟ್ಟುವಂತೆ ನೆನಪಿಸಿಕೊಂಡು ಹೇಳುವುದು ಆರ್ ವಿ ದೇಶಪಾಂಡೆ ಅವರಿನ ಬಹುದೊಡ್ಡ ಶಕ್ತಿ.
ಆರ್ ವಿ ದೇಶಪಾಂಡೆ ಅವರು ಸಭೆ-ಸಮಾರಂಭ ನಡೆಸುತ್ತಾರೆ ಎಂದರೆ ಪೂರ್ವ ಸಿದ್ಧತೆ ಇಲ್ಲದೇ ಯಾವ ಅಧಿಕಾರಿಯೂ ಸಭೆಗೆ ಬರುತ್ತಿರಲಿಲ್ಲ. ಅಧಿವೇಶನಗಳಲ್ಲಿಯೂ ಆರ್ ವಿ ದೇಶಪಾಂಡೆ ಅವರ ಅಬ್ಬರ ಅಷ್ಟಿಷ್ಟಲ್ಲ. ಸದ್ಯ ಸಚಿವ ಸ್ಥಾನದಿಂದ ಆರ್ ವಿ ದೇಶಪಾಂಡೆ ವಂಚಿತರಾಗಿದ್ದರೂ ಸರ್ಕಾರದ ಮಟ್ಟದಲ್ಲಿ ಅವರ ಪ್ರಭಾವ ಕುಗ್ಗಿಲ್ಲ. ಅನಾಧಿಕಾಲದಿಂದಲೂ ಮನೆಗೆ ಬರುವ ಸಾವಿರಾರು ಜನರನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಆಗು-ಹೋಗುಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ. ಹೊಲದಲ್ಲಿ ಕೆಲಸ ಮಾಡುವವವ ಬಳಿ ಸ್ವತಃ ತೆರಳಿ ಅಗತ್ಯವಿದ್ದ ಕಾಗದ-ಪತ್ರವನ್ನು ಒದಗಿಸಿದನ್ನು ಅನೇಕ ರೈತರು ಈಗಲೂ ನೆನೆಯುತ್ತಾರೆ.
ಈವರೆಗೆ 9 ಬಾರಿ ಶಾಸಕರಾಗಿ ದಾಖಲೆ ಬರೆದಿರುವ ಆರ್ ವಿ ದೇಶಪಾಂಡೆ ಕೈಗಾರಿಕೆ, ಶಿಕ್ಷಣ, ನಗರಾಭಿವೃದ್ಧಿ, ಕಂದಾಯ, ಪ್ರವಾಸೋದ್ಯಮ ಸಚಿವರಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆಯ ಹಿರಿಯ ಸದಸ್ಯರಾದ ಅವರು `ಅತ್ಯುಉತ್ತಮ ಶಾಸಕ’ ಎಂಬ ಬಿರುದು ಪಡೆದಿದ್ದಾರೆ. ಚುನಾವಣೆ ವೇಳೆ ರಾಜಕೀಯ ಕಚ್ಚಾಟ ಸಹಜವಾದರೂ ಮತದಾನದ ಮರುದಿನದ ಅಭಿವೃದ್ಧಿ ಕೆಲಸದಲ್ಲಿ ಅವರು ರಾಜಿಯಾದ ಉದಾಹರಣೆಗಳಿಲ್ಲ. ಸದ್ಯ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಎಲ್ಲಡೆ ಸಡಗರ-ಸಂಭ್ರಮ!
ಆರ್ ವಿ ದೇಶಪಾಂಡೆ ಅವರ ಹುಟ್ಟುಹಬ್ಬದ ಹಿನ್ನಲೆ ಅವರಿಗೆ ಶುಭಾಶಯಗಳ ಸುರಿಮಳೆಯಾಗಿದೆ. ಈ ದಿನ ಅವರ ಅಭಿಮಾನಿಗಳು ಎಲ್ಲಡೆ ಸಂಭ್ರಮಿಸುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿನ ಬಡ ರೋಗಿಗಳಿಗೆ ಹಣ್ಣು ನೀಡಿ ಸತ್ಕರಿಸಿದ್ದಾರೆ.