ಅಂಕೋಲಾ ಬೇಲೆಕೇರಿಯಲ್ಲಿ 30 ಅಡಿ ಆಳಕ್ಕೆ ಬಿದ್ದಿದ್ದ ಗೋವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ. ರಾತ್ರಿ 11.45ರ ವೇಳೆಗೆ ಫೋನ್ ಬಂದರೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಜನರ ಪ್ರೀತಿಗಳಿಸಿದರು.
ಬೇಲೆಕೇರಿ ಬಳಿ ಮೊನ್ನೆ ರಾತ್ರಿ ತೆರದ ಬಾವಿಯೊಳಗೆ ಹಸು ಬಿದ್ದಿತು. ಹಸುವಿನ ಕೂಗು ಆಲಿಸಿದ ಜನ ಅಗ್ನಿಶಾಮಕ ಸಿಬ್ಬಂದಿಯ ನೆರವು ಯಾಚಿಸಿದರು. 30 ಅಡಿ ಆಳದಲ್ಲಿದ್ದ ಹಸುವನ್ನು ಮೇಲೆತ್ತುವುದು ಸುಲಭವಾಗಿರಲಿಲ್ಲ. ಬಹುತೇಕರು ಹಸು ಬದುಕುವ ಸಾಧ್ಯತೆ ಇಲ್ಲ ಎಂದೇ ಅಭಿಪ್ರಾಯಪಟ್ಟಿದ್ದರು. ಅದಾಗಿಯೂ ಸಾಹಸ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಆ ಹಸುವಿನ ಪ್ರಾಣ ಉಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ಜಯಂತ ನಾಯ್ಕ, ಗಜಾನನ ನಾಯ್ಕ, ರಾಜೇಶ ನಾಯಕ ಅವರು ಹಗ್ಗದ ಮೇಲೆ ಸಾಹಸ ಮಾಡಿದರು. ಅದೇ ಹಗ್ಗದ ಸಹಾಯದಿಂದ ಗಣೇಶ ನಾಯ್ಕ, ಹರ್ಷ ನಾಯಕ, ಮಂಜುನಾಥ ನಾಯಕ ಹಸುವನ್ನು ಮೇಲೆತ್ತಿದರು. ಸುಜಯ ನಾಯಕ, ಶ್ರೀನಿವಾಸ ನಾಯಕ ಅವರು ಹಸುವಿಗೆ ಪೆಟ್ಟಾಗದಂತೆ ಮುನ್ನಚ್ಚರಿಕೆವಹಿಸಿದರು.
ಈ ಎಲ್ಲರ ಪ್ರಯತ್ನದಿಂದ ಆಳವಾದ ಬಾವಿಯಲ್ಲಿ ಬಿದ್ದಿದ್ದ ಹಸು ಹಂತ ಹಂತವಾಗಿ ಮೇಲೆ ಬಂದಿತು. ಎಲ್ಲರೂ ಪುಣ್ಯಕೋಟಿಗೆ ನಮಿಸಿ, ಅದರ ಪ್ರಾಣ ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು.