ಮೀನುಗಾರಿಕೆಗೆ ತೆರಳಿ ಮನೆಗೆ ಮರಳಿದ ಅಶೋಕ ಅಂಬಿಗ ಆಯಾಸಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯ ಆಘಾತದಿಂದ ಸಾವನಪ್ಪಿದ್ದಾರೆ.
ಹೊನ್ನಾವರ ಕಾಸರಕೋಡು ತೊಪ್ಪಲಕೇರಿಯ ಅಶೋಕ ಅಂಬಿಗೆ ಅವರು ಹೊಳೆಬದಿಕೇರಿಯ ಹೊಸಪಟ್ಟಣದಲ್ಲಿ ವಾಸವಾಗಿದ್ದರು. ಫೆ 15ರಂದು ಬೆಳಗ್ಗೆ ಬೇಗ ಎದ್ದು ಅವರು ಮೀನುಗಾರಿಕೆಗೆ ಹೋಗಿದ್ದರು. ಎಂದಿನoತೆ ಮೀನುಗಾರಿಕೆ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದ್ದರು.
ಮನೆಗೆ ಮರಳಿದ ನಂತರ ಆಯಾಸಗೊಂಡ ಕಾರಣ ಮಲಗಿದ್ದರು. ಅಸ್ವಸ್ಥರಾದ ಅವರನ್ನು ಪತ್ನಿ ಚಿತ್ರಾ ಹಾಗೂ ಅಕ್ಕ-ಪಕ್ಕದ ಮನೆಯವರು ಸೇರಿ ರಿಕ್ಷಾದಲ್ಲಿ ಹೊನ್ನಾವರಕ್ಕೆ ಕರೆತಂದರು. ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಹೃದಯಘಾತದಿಂದ ಅಶೋಕ ಅಂಬಿಗ ಸಾವನಪ್ಪಿದರು.