ಶಿರಸಿಯ ಮಳಲಿ ನೆಗ್ಗುವಿನ ಅಕ್ಷತಾ ಗೌಡ ಅವರು ಕಾಣೆಯಾಗಿದ್ದಾರೆ. ಅವರ ತಂದೆ ಮಂಜುನಾಥ ಗೌಡ ಮಗಳಿಗಾಗಿ ಎಲ್ಲಡೆ ಹುಡುಕಾಟ ನಡೆಸಿದ್ದಾರೆ.
ಮಾರ್ಚ 14ರ ಮಧ್ಯಾಹ್ನ 2.30ರವರೆಗೆ ಅಕ್ಷತಾ ಗೌಡ (20 ವರ್ಷ) ಮನೆಯಲ್ಲಿದ್ದರು. ಅದಾದ ನಂತರ ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, ಸಂಜೆ 6 ಗಂಟೆಗೆ ಮರಳಿದಾಗ ಅಕ್ಷತಾ ಗೌಡ ಕಾಣಲಿಲ್ಲ. ಹೀಗಾಗಿ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೂ, ಅಕ್ಷತಾ ಗೌಡ ಪತ್ತೆಯಾಗಲಿಲ್ಲ.
ಮನೆಯಿಂದ ಹೊರ ಹೋಗುವ ಮುನ್ನ ಅಕ್ಷತಾ ಗೌಡ ಮನೆಗೆ ಬೀಗ ಹಾಕಿದ್ದಾರೆ. ಆದರೆ, ಚಾವಿಯನ್ನು ಮನೆ ಮುಂದಿನ ಬಾಗಿಲ ಮೇಲಿರಿಸಿದ್ದಾರೆ. ಮನೆಯಿಂದ ಹೊರಡುವ ಮುನ್ನ ಯಾರಿಗೂ ವಿಷಯ ತಿಳಿಸಿಲ್ಲ. ಹೀಗಾಗಿ ಅಕ್ಷತಾ ಗೌಡ ಎಲ್ಲಿ ಹೋದರು? ಎಂದು ಗೊತ್ತಾಗಿಲ್ಲ.
ಮರು ದಿನ ಸಹ ಅಕ್ಷತಾ ಗೌಡ ಅವರಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆದಿದ್ದು, ಆ ವೇಳೆಯಲ್ಲಿಯೂ ಸಿಗದ ಕಾರಣ ಕುಟುಂಬದವರು ಪೊಲೀಸರ ಮೊರೆ ಹೋದರು. ಮಗಳು ಕಾಣೆಯಾಗಿರುವ ಬಗ್ಗೆ ಮಂಜುನಾಥ ಗೌಡ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಇದೀಗ ಹುಡುಕಾಟ ಶುರು ಮಾಡಿದ್ದಾರೆ.