ದಾoಡೇಲಿ: ಬಿಸಿಎಂ ವಸತಿ ನಿಲಯದಲ್ಲಿ ತಂಗಿದ್ದ ಅನೀಶ್ ಬಿ ಗಾಣಿಗೇರ ಸಾವನಪ್ಪಿದ್ದಾರೆ.
ಹುಬ್ಬಳ್ಳಿ ಮೂಲದ ಅನೀಶ್ ಅಂಬೇವಾಡಿಯ ಹಾಸ್ಟೇಲಿನಲ್ಲಿ ವಾಸವಾಗಿದ್ದು, ಜಿಟಿಟಿಸಿ ಕಾಲೇಜಿನಲ್ಲಿ ಓದುತ್ತಿದ್ದರು. ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದರು. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಮಂಗಳವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಕಾಲೇಜಿಗೆ ಹೋಗಿರಲಿಲ್ಲ. ವಸತಿ ನಿಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ, ಪ್ರಯೋಜನವಾಗಲಿಲ್ಲ.