ಕುಮಟಾ: ಗೋರೆ ಗುಡ್ಡದ ಗೋಪಾಲಕೃಷ್ಣ ದೇವಾಲಯದ ಬಳಿ ನಾನಾ ಭಾಗದ ಜನ ಬಂದು ಜೂಜಾಟ ಆಡುತ್ತಾರೆ. ಮೆಣದ ಬತ್ತಿ ಬೆಳಕಿನಲ್ಲಿ ಇಸ್ಪೀಟ್ ಆಡುತ್ತಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ 27ರ ನಸುಕಿನ 1.40ಕ್ಕೆ ಒಟ್ಟು ಎಂಟು ಜನ ಇಲ್ಲಿ ಜೂಜಾಡುತ್ತಿದ್ದರು. ಪಿಎಸ್ಐ ಮಯೂರ ಪಟ್ಟಣಶೆಟ್ಟಿ ದಾಳಿ ನಡೆಸಿದಾಗ ಆರು ಜನ ಸಿಕ್ಕಿ ಬಿದ್ದರು. ಅವರ ಬಳಿಯಿದ್ದ 6380ರೂ ಹಣ ಹಾಗೂ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದರು.
ಹೊನ್ನಾವರ ಅರೆಅಂಗಡಿಯ ವಸಂತ ಶೆಟ್ಟಿ, ಮುರುಡೇಶ್ವರದ ವೆಂಕಟೇಶ, ಕಲಘಟಗಿಯ ಬಸವರಾಜ ಹುಬ್ಬಳಿ, ಕುಮಟಾ ಹೊನ್ಗಾವಿನ ದಾಮೋದರ ಗಾವಡಿ, ಹೊನ್ನಾವರ ರಾಯಲ್ಕೇರಿಯ ಗೌಥಮ ಆಚಾರಿ, ಶಿವಾಜಿ ಬಾವಣ್ಣಿನವರ್ ಸಿಕ್ಕಿ ಬಿದ್ದರು.
ಹೊನ್ನಾವರ ಬೇಲಿಕೇರಿಯ ವಸಂತ ಅಂಬಿಗ ಹಾಗೂ ಹೊನ್ನಾವರ ಆರೋಳ್ಳಿಯ ಸುಬ್ರಾಯ ಗೌಡ ಓಡಿ ಹೋಗಿ ತಪ್ಪಿಸಿಕೊಂಡರು. ಅವರು ಹಾಸಿಕೊಂಡಿದ್ದ ತಾಡಪತ್ರೆ, ಮೇಣದಬತ್ತಿ ಜೊತೆ ಅಲ್ಲಿದ್ದ ಪರಿಕ್ಕರಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ಜೂಜಾಟ ಜೀವನಕ್ಕೆ ಅಪಾಯ