ಅಂಕೋಲಾ: ಕಳೆದು ಐದು ವರ್ಷದಿಂದ ಗುಜುರಿ ಆರಿಸಿ ಬದುಕುತ್ತಿದ್ದ ರವಿ ಗೌಡ ಸಾವನಪ್ಪಿದ್ದಾರೆ.
ಐದು ವರ್ಷದ ಹಿಂದೆ ಬಾಗಲಕೋಟೆಯಿಂದ ಅಂಕೋಲಾಗೆ ಬಂದ ರವಿ ಗೌಡ ಗುಜುರಿ ಅಂಗಡಿ ನಡೆಸುವ ಅಣ್ಣಪ್ಪ ವಾಸ್ಟರ್ ಬಳಿ ಆಶ್ರಯ ಕೇಳಿದ್ದರು. ಅಲ್ಲಿಂದ ಮುಂದೆ ಪ್ಲಾಸ್ಟಿಕ್, ಕಬ್ಬಿಣ ಆರಿಸಿ ತಂದು ಹಣ ಪಡೆಯುತ್ತಿದ್ದರು.
ಈಚೆಗೆ ವಿಪರೀತ ಸರಾಯಿ ಕುಡಿಯುವುದನ್ನು ರವಿ ಗೌಡ ರೂಢಿಸಿಕೊಂಡಿದ್ದರು. ಪರಿಣಾಮ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಅಲ್ಲಿಯೂ ತಮ್ಮ ಸಂಬAಧಿಕರ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ.
ಸೋಮವಾರ ಆಸ್ಪತ್ರೆ ಸೇರಿದ ಅವರನ್ನು ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಯೇ ಸಾವನಪ್ಪಿದರು.