ಕುಮಟಾ: ಜಲ ಜೀವನ್ ಮಿಷನ್ ಅಡಿ ದುಡಿಯುತ್ತಿರುವ ಕಾರ್ಮಿಕರಿಗೆ ದೀಪಾವಳಿ ರಜೆ ಸಿಕ್ಕಿಲ್ಲ. ಕಾಮಗಾರಿಯ ಗುತ್ತಿಗೆದಾರರು ದೀಪಾವಳಿ ಬೋನಸ್ ಸಹ ನೀಡಿಲ್ಲ. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಅಲ್ಲಿನ ಕಾರ್ಮಿಕರನ್ನು ಮಾತನಾಡಿಸಿ ಸಿಹಿ ಹಂಚಿದರು.
ಜನತಾ ಫ್ಲೋಟ್ ಮಾಸೂರು ಕ್ರಾಸ್ ರಸ್ತೆ ಅಂಚಿನಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಆಂದ್ರ ಪ್ರದೇಶದ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. ಈ ಕಾರ್ಮಿಕರಿಗೆ ದೀಪಾವಳಿಗೆ ರಜೆ ಜೊತೆ ಬೋನಸ್ ನೀಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ, ಮಂಗಳೂರಿನ ಗುತ್ತಿಗೆದಾರರು ಕಾರ್ಮಿಕರಿಗೆ ಶುಭಾಶಯ ತಿಳಿಸಲು ಬಂದಿಲ್ಲ.
ಇದನ್ನು ಅರಿತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ದೀಪಾವಳಿ ಸಿಹಿ ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಅಮೀನ ಸಯ್ಯದ್, ಲಕ್ಷಿö್ಮÃ ನಾಯ್ಕ ಇದ್ದರು. ಕಾರ್ಮಿಕರಾದ ಮಲ್ಲಮ್ಮ ನಾಗೇಂದ್ರ, ಹೇಮಾ ರೆಡ್ಡಿ, ಚಿಟ್ಟೆಮ್ಮ, ಸಾಕಮ್ಮ, ಕಲ್ಲೇನು ಸಂತಸ ವ್ಯಕ್ತಪಡಿಸಿದರು.