ಸಿದ್ದಾಪುರ: ಮನೆ ನಿರ್ಮಾಣದ ವೇಳೆ ಮಾವನಿಗೆ ಆರ್ಥಿಕ ನೆರವು ನೀಡಿದ್ದ ಗಣಪತಿ ಬೋವಿ ಪೆಟ್ಟು ತಿಂದಿದ್ದಾರೆ. ಕೊಟ್ಟ ಕಾಸು ಮರಳಿ ಕೇಳಿದ್ದಕ್ಕಾಗಿ ಗಣಪತಿ ಬೋವಿ ಅವರ ಮಾವ ಅವರ ಮಾವ ಭೂತ ಬೋವಿ ತಮ್ಮ ಬಾವನ ಜೊತೆ ಬಂದು ಕಣ್ಣಿಗೆ ಖಾರದ ಪುಡಿ ಎರಜಿ, ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ!
ಸಿದ್ದಾಪುರ ನೆಜ್ಜೂರಿನ ಗಣಪತಿ ಧರ್ಮ ಬೋವಿ (27) ಒಂದುವರೆ ವರ್ಷದ ಹಿಂದೆ ತಮ್ಮ ಮಾವನಾದ ಭೂತ ನಾಗ ಬೋವಿ ಅವರಿಗೆ 2.5 ಲಕ್ಷ ರೂ ನೀಡಿದ್ದರು. ಈ ಹಣವನ್ನು ಭೂತ ಬೋವಿ ಮನೆ ನಿರ್ಮಾಣಕ್ಕೆ ಬಳಸಿಕೊಂಡಿದ್ದರು. ತಾನು ನೀಡಿದ ಹಣ ಮರಳಿಸುವಂತೆ ಗಣಪತಿ ಬೋವಿ ಕೇಳಿದ್ದರೂ ಅದನ್ನು ಭೂತ ಬೋವಿ ಕೊಟ್ಟಿರಲಿಲ್ಲ. ಹಣ ಮರಳಿಸಲು ಸತಾಯಿಸುತ್ತಿದ್ದರು.
ಡಿ 21ರ ಸಂಜೆ ಮಾವ ಭೂತ ಬೋವಿಗೆ ಫೋನ್ ಮಾಡಿದ ಗಣಪತಿ ಬೋವಿ ಜೋರಾಗಿ ಮಾತನಾಡಿದರು. `ಕೂಡಲೇ ಹಣ ಮರಳಿಸಬೇಕು’ ಎಂದು ತಾಕೀತು ಮಾಡಿದ್ದರು. ಆಗ, `ಹಣ ಮರಳಿಸುವುದಿಲ್ಲ’ ಎಂದು ಭೂತ ಬೋವಿ ಜೋರಾಗಿಯೇ ಹೇಳಿದ್ದರು.
ಶನಿವಾರ ರಾತ್ರಿ ರಾತ್ರಿ 8.40ಕ್ಕೆ ಹಾರೆಗೊಪ್ಪ ಶಾಲೆ ಬಳಿ ಗಣಪತಿ ಧರ್ಮ ಬೋವಿ ನಡೆದು ಹೋಗುವಾಗ ಬೈಕಿನಲ್ಲಿ ಬಂದು ಅಡ್ಡಗಟ್ಟಿದರು. ಭೂತ ಬೋವಿ ಅವರ ಜೊತೆಗಿದ್ದ ಅವರ ಭಾವ ಗಣಪತಿ ಬೀರ ಬೋವಿ ಎಂಬಾತರು ಗಣಪತಿ ಧರ್ಮ ಬೋವಿ ಅವರ ಕಣ್ಣಿಗೆ ಖಾರದ ಪುಡಿ ಎರಚಿದರು. ಅದಾದ ನಂತರ ಭೂತ ಬೋವಿ ಕಬ್ಬಿಣದ ರಾಡಿನಿಂದ ಅಳಿಯನಿಗೆ ಬಡಿದರು.
ತಲೆ, ಬೆನ್ನು, ಮೈ-ಕೈ ಮೇಲೆ ಕಬ್ಬಿಣದ ಬರೆ ಬಿದ್ದಿದ್ದರಿಂದ ಗಣಪತಿ ಧರ್ಮ ಬೋವಿ ಅಲ್ಲಿ ಕುಸಿದು ಬಿದ್ದಿದ್ದರು. ಕಣ್ಣಿಗೆ ಬಿದ್ದ ಖಾರದಪುಡಿಯಿಂದ ಒದ್ದಾಡುತ್ತಿದ್ದರು. ಈ ವೇಳೆ `ಮತ್ತೆ ಹಣ ಕೇಳಿದರೆ ಜೀವಸಹಿತ ಬಿಡುವುದಿಲ್ಲ’ ಎಂದು ಭೂತ ಬೋವಿ ಬೆದರಿಸಿ ಅಲ್ಲಿಂದ ತೆರಳಿದರು. ಹಾಗೂ ಹೀಗೂ ಮಾಡಿ ಸರ್ಕಾರಿ ಆಸ್ಪತ್ರೆ ಸೇರಿದ ಗಣಪತಿ ಧರ್ಮ ಬೋವಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಷಯ ಅರಿತ ಪೊಲೀಸರು ಆಸ್ಪತ್ರೆಗೆ ತೆರಳಿ ವಿವಿರ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.