ಕಾರವಾರ: ಹಬ್ಬುವಾಡದಲ್ಲಿರುವ MSIL ಮದ್ಯದ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ಶುಕ್ರವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಶನಿವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅಲ್ಲಿದ್ದ ಹಣ ನಾಪತ್ತೆಯಾಗಿರುವುದು ಗೊತ್ತಾಗಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಅಲ್ಲಿನ ಸಿಬ್ಬಂದಿ ಮದ್ಯದ ಮಳಿಗೆಯ ಬಾಗಿಲು ಮುಚ್ಚಿದ್ದಾರೆ. ಬೆಳಗ್ಗೆ 9 ಗಂಟೆಗೆ ಎಂದಿನAತೆ ಬಾಗಿಲು ತೆರೆದಿದ್ದಾರೆ.
ಈ ನಡುವೆ ಮದ್ಯದ ಮಳಿಗೆಯ ಕ್ಯಾಶ್ ಕೌಂಟರಿನಲ್ಲಿದ್ದ 72500ರೂ ಕಣ್ಮರೆಯಾಗಿದೆ. ಈ ಅಂಗಡಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ ನಾಯ್ಕ ಹಣ ಕಳ್ಳತನದ ಬಗ್ಗೆ ಎಲ್ಲಾ ಸಿಬ್ಬಂದಿಯಲ್ಲಿ ವಿಚಾರಿಸಿದ್ದಾರೆ. ಆದರೆ, ಎಲ್ಲರೂ `ತಮಗೆ ಗೊತ್ತಿಲ್ಲ.. ತಮಗೆ ಗೊತ್ತಿಲ್ಲ’ ಎಂಬ ಹೇಳಿಕೆ ನೀಡಿದ್ದು, ಈ ಹಿನ್ನಲೆ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.