ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಭಾರತೀಯ ನೌಕಾನೆಲೆ ಉದ್ಯೋಗಿಯೊಬ್ಬರು ತಮ್ಮ 39ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ.
ರಾಜಸ್ಥಾನ ಮೂಲಕ ಬಜೇಂದ್ರ ಬನ್ಸಾಲ್ ಎಂಬಾತರು ಕಾರವಾರ ನೇವಲ್ ಬೇಸ್ ಒಳಗೆ ಡಿಫೆನ್ಸ ಸಿವಿಲಿಯನ್ ಆಗಿ ಕೆಲಸ ಮಾಡುತ್ತಿದ್ದರು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ವಿಪರೀತ ಸರಾಯಿ ಸೇವನೆಯ ಚಟ ಅಂಟಿಕೊoಡಿತ್ತು. ಅಮದಳ್ಳಿ ಮುದುಗಾ ಬಳಿಯ ಎನ್ಸಿಎಚ್ ಕಾಲೋನಿಯಲ್ಲಿ ಅವರು ಕೊಠಡಿ ಪಡೆದು, ಅಲ್ಲಿಯೇ ವಾಸವಾಗಿದ್ದರು.
ಜನವರಿ 31ರ ಬೆಳಗ್ಗೆ 8 ಗಂಟೆಗೆ ಕೊಠಡಿ ಒಳಗೆ ಪ್ರವೇಶಿಸಿದ ಅವರು ಹೊರಗೆ ಬಂದಿರಲಿಲ್ಲ. ಫೆಬ್ರವರಿ 1ರಂದು ಕೊಠಡಿಯೊಳಗೆ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿದೆ. ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಬಜೇಂದ್ರ ಬನ್ಸಾಲ್ ಕೊನೆ ಉಸಿರೆಳೆದಿದ್ದಾರೆ. ಅವರ ಸಾವು ಖಚಿತಪಡಿಸಿಕೊಂಡ ಡಿಫೆನ್ಸ ಸಿವಿಯಲಿಯನ್ ಆರ್ ಕೆ ಸಿಂಗ್ ಕಾರವಾರ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.