ತಿಂಗಳ ಹಿಂದೆ ನಡೆದ ಹೊಡೆದಾಟದಲ್ಲಿ ತಮ್ಮ ಜೊತೆಗೆ ಬಾರದ ಕಾರಣ ಯುವಕನಿಗೆ ಆತನ ಸ್ನೇಹಿತರೇ ಚೂರಿ ಹಾಕಿದ್ದಾರೆ.
ಭಟ್ಕಳ ತಾಲೂಕಿನ ಪುರವರ್ಗ ರೈಲ್ವೆ ಹಳಿ ಸಮೀಪ ಮಂಗಳವಾರ ರಾತ್ರಿ ಭಗತನಗರದ ನಾಗರಾಜ ನಾಯ್ಕರ ಮೇಲೆ ದಾಳಿ ನಡೆದಿದೆ. ಮಂಜುನಾಥ ಮಾಸ್ತಪ್ಪ ನಾಯ್ಕ ಪುರವರ್ಗ, ದಯಾನಂದ ವೈಕುಂಠ ನಾಯ್ಕ ಹಡೀನ ಹಾಗೂ ಶಿವ ರಾಜು ನಾಯ್ಕ ಚಾಕು ಇರಿದು ನಾಗರಾಜ ನಾಯ್ಕರನ್ನು ಗಾಯಗೊಳಿಸಿದ್ದಾರೆ.
ಭಟ್ಕಳದ ಸೋಡಿಗದ್ದೆ ಜಾತ್ರೆ ಸಮಯದಲ್ಲಿ ಮಂಜುನಾಥ ನಾಯ್ಕ ಮತ್ತು ದಯಾನಂದ ನಾಯ್ಕ ಸೇರಿಕೊಂಡು ವೆಂಕಟೇಶ ಮಂಜುನಾಥ ನಾಯ್ಕ ಮೇಲೆ ಹಲ್ಲೆ ನಡೆಸಿದ್ದರು. ಈ ಗಲಾಟೆಯಿಂದ ನಾಗರಾಜ ನಾಯ್ಕ ದೂರವುಳಿದಿದ್ದರು. ಇದೇ ಸಿಟ್ಟಿನಿಂದ ನಾಗರಾಜ ನಾಯ್ಕರ ಮೇಲೆ ಇದೀಗ ಹಲ್ಲೆ ನಡೆದಿದೆ. ಡಿ 18ರ ರಾತ್ರಿ 11.40ರ ಸುಮಾರಿಗೆ ನಾಗರಾಜ ಮತ್ತು ಆತನ ಗೆಳೆಯ ಲೊಕೇಶ ನಾಯ್ಕ ಬೈಕಿನಲ್ಲಿ ಬರುತ್ತಿದ್ದಾಗ ಮೂವರು ಅಡ್ಡಗಟ್ಟಿ ದಾಳಿ ಮಾಡಿದ್ದಾರೆ.
ಅಡ್ಡಗಟ್ಟಿದ ಮೂವರು ಒಂದೇ ಬೈಕಿನಲ್ಲಿ ಬಂದಿದ್ದು, ಆ ಪೈಕಿ ಮಂಜುನಾಥ ನಾಯ್ಕ ತನ್ನ ಬಳಿ ಇದ್ದ ಚಾಕುವಿನಿಂದ ನಾಗರಾಜನ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರಲಾಗಿದೆ.