`ದಿನ ಕಳೆದಂತೆ ತನಗೆ ವಯಸ್ಸಾಗುತ್ತಿದೆ’ ಎಂದು ಕೊರಗುತ್ತಿದ್ದ ನಾರಾಯಣ ವೈದ್ಯ ಆ ಕೊರಗು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ!
ಕುಮಟಾ ತಾಲೂಕಿನ ಸುವರ್ಣಗದ್ದೆ ಹೊರಭಾಗದ ನಾರಾಯಣ ವೈದ್ಯ ಅವರು ಎಲೆಕ್ಟಿಕಲ್ ವೃತ್ತಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಆದರೆ, ಯಾವುದೇ ದೈಹಿಕ ಸಮಸ್ಯೆ ಇರಲಿಲ್ಲ. ಅದಾಗಿಯೂ `ನಿತ್ಯವೂ ಅವರು ತನಗೆ ವಯಸ್ಸಾಗುತ್ತಿದೆ’ ಎಂದು ಕೊರಗುತ್ತಿದ್ದರು.
`ಇನ್ನು ಹೆಚ್ಚು ವಯಸ್ಸಾದ ನಂತರ ಕೆಲಸ ಮಾಡಲು ಆಗುವುದಿಲ್ಲ’ ಎಂದು ಬೇಸರಿಸಿಕೊಂಡಿದ್ದರು. ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ವಯಸ್ಸು ಹಾಗೂ ವೃದ್ದಾಪ್ಯದ ದಿನಗಳನ್ನು ನೆನೆದು ಆಘಾತಕ್ಕೆ ಒಳಗಾಗಿದ್ದರು.
ಫೆ 17ರಂದು ಅವರು ಕೆಲಸ ಮಾಡುವ ಉದ್ದೇಶದಿಂದ ಗದ್ದೆಗೆ ಹೋಗಿದ್ದರು. ಅಲ್ಲಿ ಸಹ ಅವರ ತಲೆಯೊಳಗೆ `ವಯಸ್ಸಿನ ಭೂತ’ ಆವರಿಸಿತು. `ತನಗೆ ವಯಸ್ಸಾಗಿದೆ’ ಎಂಬ ಭ್ರಮೆಗೆ ಸಿಲುಕಿದ ಅವರು ಗದ್ದೆಯಲ್ಲಿದ್ದ ಗೇರು ಮರಕ್ಕೆ ಸೀರೆ ಕಟ್ಟಿದರು. ಆ ಸೀರೆಗೆ ತಮ್ಮ ಕುತ್ತಿಗೆಯನ್ನು ಸಿಲುಕಿಸಿಕೊಂಡು ಜೋತಾಡಿದರು.
ಅಲ್ಲಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿದ್ದು, ಇದನ್ನು ನೋಡಿದ ನಾರಾಯಣ ವೈದ್ಯರ ಮಗ ಪ್ರದೀಪ ವೈದ್ಯ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸ್ ಪ್ರಕರಣ ದಾಖಲಾದ ನಂತರ ಶವ ಪಡೆದು ಅಂತ್ಯ ಸಂಸ್ಕಾರ ನೆರವೇರಿಸಿದರು.