ಮುರುಡೇಶ್ವರ ವ್ಯಾಪ್ತಿಯಲ್ಲಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಪಿಎಸ್ಐ ಹಣುಮಂತ ಬೀರಾದರ್ ಬೆಂಗ್ಲೆಯ ಅಂತಯ್ಯನ ಮನೆ ಹತ್ತಿರ ನಡೆಯುತ್ತಿದ್ದ ಗುಡು ಗುಡಿ ಆಟಕ್ಕೆ ಕಡಿವಾಣ ಹಾಕಿದ್ದಾರೆ.
ಮಾರ್ಚ 16ರ ರಾತ್ರಿ 10.45ರ ವೇಳೆಗೆ ಶೆಟ್ಲಿ ಪಾಯಂಟ್’ಗೆ ಹೋಗುವ ರಸ್ತೆ ಅಂಚಿನಲ್ಲಿ ಗುಡು ಗುಡಿ ಆಟ ನಡೆಯುತ್ತಿತ್ತು. ಆರ್ಟಿನ್, ಇಸ್ಪಿಟ್, ಸೂರ್ಯ, ಚಂದ್ರ, ಚೌಕಾ, ಕಳಾವರ್ ಚಿತ್ರಗಳ ಮೇಲೆ ಜನ ಹಣ ಹೂಡುತ್ತಿದ್ದರು. ಭಟ್ಕಳ ಮಾವಿನಕಟ್ಟಾದಲ್ಲಿ ಮೇಸ್ತಿ ಕೆಲಸ ಮಾಡಿಕೊಂಡಿದ್ದ ವಿನಾಯಕ ದೇವಾಡಿಗ ಈ ಗುಡು ಗುಡಿ ಆಟದ ಉಸ್ತುವಾರಿವಹಿಸಿದ್ದರು. ಮಾವಿನಕಟ್ಟಾ ಕೇಶುಮನೆಯ ಹೋಟೆಲ್ ಕೆಲಸದಾಳು ನಾಗಪ್ಪ ದೇವಾಡಿಗ, ಮಾವಿನಕಟ್ಟಾ ಮೋಳಿಮನೆಯ ಹರೀಶ ಗಣಪತಿ ದೇವಾಡಿಗ ಸಹ ಅಕ್ರಮ ಆಟದ ವಿಷಯದಲ್ಲಿ ವಿನಾಯಕ ದೇವಾಡಿಗ ಜೊತೆಗಾರರಾಗಿದ್ದರು.
ಈ ಮೂವರು ಜೂಜಾಟದಿಂದ ಬರುವ ಲಾಭದ ಹಣವನ್ನು ಈ ಮೂವರು ಸೇರಿ ಹಂಚಿಕೊಳ್ಳುವ ಬಗ್ಗೆ ಮಾತನಾಡಿಕೊಂಡಿದ್ದರು. ಅದಕ್ಕಾಗಿ ರಸ್ತೆಯಲ್ಲಿ ಹೋಗಿ ಬರುವವರಿಗೆ ಹಣ ಡಬಲ್ ಮಾಡಿಕೊಡುವ ಆಮೀಷ ಒಡ್ಡಿ, ಕಾನೂನುಬಾಹಿರ ಆಟವಾಡಿಸುತ್ತಿದ್ದರು. ಈ ವಿಷಯ ಅರಿತ ಪಿಎಸ್ಐ ಹಣುಮಂತ ಬೀರಾದರ್ ತಮ್ಮ ಪೊಲೀಸ್ ಪಡೆಯೊಂದಿಗೆ ದಾಳಿ ಮಾಡಿದರು.
ಪೊಲೀಸರನ್ನು ಕಂಡ ಆ ಮೂವರು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡರು. ಅದಾಗಿಯೂ ಗುಡುಗುಡಿ ಮಂಡಳದ ಪಟ ಅಲ್ಲಿಯೇ ಬಿದ್ದಿತ್ತು. ಆ ಪಟದ ಮೇಲೆ ಅಕ್ರಮ ಆದಾಯದ 4700ರೂ ಹಣ, ಪ್ಲಾಸ್ಟಿಕ್ ಡಬ್ಬಿ ಹಾಗೂ ಬ್ಯಾಟರಿಯಿರುವುದನ್ನು ಪೊಲೀಸರು ಗಮನಿಸಿದರು. ಪಂಚರ ಸಮಕ್ಷೇಮದಲ್ಲಿ ಅಲ್ಲಿದ್ದ ವಸ್ತುಗಳ ಪಂಚನಾಮೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದರು. ಜೂಜಾಟ ನಡೆಸಿ ಓಡಿಹೋದ ಮೂವರ ವಿರುದ್ಧವೂ ಪ್ರಕರಣ ದಾಖಲಿಸುವ ಮೂಲಕ ಕಾನೂನು ಕ್ರಮ ಜರುಗಿಸಿದರು.