ದಾoಡೇಲಿ: ವೆಸ್ಟಕೋಸ್ಟ ಪೆಪರ್ ಮಿಲ್’ನ ನೀರಿನ ಪಂಪ್ ಕದಿಯಲು ಬಂದಿದ್ದ ಕಳ್ಳನೊಬ್ಬ ಕಪೌಂಡ್ ಹಾರುವಾಗ ಬಿದ್ದು ಗಾಯಗೊಂಡಿದ್ದು, ಆತನನ್ನು ಅಲ್ಲಿನ ಭದ್ರತಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ!
ದಾಂಡೇಲಿ ಗಾಂಧಿನಗರದ ಅಕ್ಷಯ ಕಂಜರಬಾoಡ್ ಹಾಗೂ ಶಿವಾಜಿ ಕಂಜರಬಾoಡ್ ಸೇರಿ ವೆಸ್ಟಕೋಸ್ಟ ಪೆಪರ್ ಮಿಲ್’ನ ನೀರಿನ ಪಂಪ್ ಕದಿಯುವ ಯೋಜನೆ ರೂಪಿಸಿದ್ದರು. 1.5 ಲಕ್ಷ ರೂ ಮೌಲ್ಯದ ಈ ಪಂಪ್ ಕದ್ದು ಸಾಗಿಸುವುದಕ್ಕಾಗಿ ಶನಿವಾರ ರಾತ್ರಿ ಅವರು ಕಾಗದ ಕಾರ್ಖಾನೆಯ ಗೇಟ್ ನಂ 2ರ ಬಳಿ ಕಂಪೌಡ್ ಹಾರಿದ್ದರು. ಅತ್ಯಂತ ಬಾರವಾದ ಕಬ್ಬಿಣದ ಪಂಪಿಗೆ ಹಗ್ಗ ಕಟ್ಟಿ ಎಳೆಯುವುದಕ್ಕಾಗಿ ಮತ್ತಿಬ್ಬರನ್ನು ಅವರು ಕರೆ ತಂದಿದ್ದರು.
ಈ ನಾಲ್ವರು ಸೇರಿ ರಾತ್ರಿ 12.20ರ ಆಸುಪಾಸಿಗೆ ನೀರಿನ ಪಂಪಿಗೆ ಹಗ್ಗ ಕಟ್ಟಿ ಎಳೆಯುತ್ತಿದ್ದರು. ಅದನ್ನು ವೆಸ್ಟಕೋಸ್ಟ ಪೆಪರ್ ಮಿಲ್’ನ ಸೆಕ್ಯುರಿಟಿ ಸಿಬ್ಬಂದಿ ನೋಡಿದರು. ಕಳ್ಳರು ಸಹ ಭದ್ರತಾ ಸಿಬ್ಬಂದಿ ಆಗಮನಿಸಿದನ್ನು ನೋಡಿ ಅಲ್ಲಿಂದ ಪರಾರಿಯಾಗುವ ಪ್ರಯತ್ನ ನಡೆಸಿದರು. ಮೂರು ಜನ ಕಪೌಂಡ್ ಹಾರಿ ಓಡಿ ಹೋದರು. ಆದರೆ, ಆ ಗಡಿಬಿಡಿಯಲ್ಲಿ ಒಬ್ಬನಿಗೆ ಕಪೌಂಡ್ ಹಾರಲು ಸಾಧ್ಯವಾಗದೇ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ಕಳ್ಳತನಕ್ಕೆ ಬಂದವರಿಗೆ ಬಾರಿಸಲು ಹೋಗಿದ್ದ ಭದ್ರತಾ ಸಿಬ್ಬಂದಿ ಕಳ್ಳನಿಗೆ ಪೆಟ್ಟಾಗಿರುವುದನ್ನು ನೋಡಿ ಮರುಕ ವ್ಯಕ್ತಪಡಿಸಿದರು. ಆತನಿಗೆ ನೀರು ಕುಡಿಸಿ ಉಪಚಾರ ಮಾಡಿದ ನಂತರ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಈ ಎಲ್ಲಾ ವಿಷಯ ಅರಿತ ವೆಸ್ಟಕೋಸ್ಟ ಪೆಪರ್ ಮಿಲ್’ನ ಸೆಕ್ಯುರಿಟಿ ಮ್ಯಾನೇಜರ್ ಕುಶಾಲಪ್ಪ ಸುಬ್ಬೆಗೌಡ ಹೆಸರು ತಿಳಿದ ಕಳ್ಳರಿಬ್ಬರ ವಿರುದ್ಧ ಪೊಲೀಸ್ ದೂರು ದಾಖಲಿಸಿದರು.
ಆಸ್ಪತ್ರೆಯಲ್ಲಿರುವ ಕಳ್ಳನನ್ನುಹೊರತುಪಡಿಸಿ ಉಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.