ಕುಮಟಾದ ಹುಲಿದೇವ ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ್ದ ಸ್ಕೂಟಿಯಲ್ಲಿದ್ದ ಹಣ ಹಾಗೂ ಮೊಬೈಲ್’ನ್ನು ಕಳ್ಳರು ದೋಚಿದ್ದಾರೆ. 62 ವರ್ಷದ ಶಶಿಕಾಂತ ನಾಯಕ 2.52 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ.
ಕುಮಟಾ ಹೆರವಟ್ಟಾದ ಶಶಿಕಾಂತ ನಾಯಕ ಅವರು ಮಂಗಳವಾರ ರಾತ್ರಿ 10 ಗಂಟೆಗೆ ಹಳೆ ತಹಶೀಲ್ದಾರ್ ಕಚೇರಿ ಎದುರು ಸ್ಕೂಟಿ ನಿಲ್ಲಿಸಿದ್ದರು. ವ್ಯಾಪಾರ ಮಾಡಿಕೊಂಡಿರುವ ಅವರು ಸ್ಕೂಟಿಯಲ್ಲಿ 2.52 ಲಕ್ಷ ರೂ ಹಣವಿರಿಸಿದ್ದರು. ಮರಳಿ ಬಂದು ನೋಡಿದಾಗ ಅವರ ಹಣ ಹಾಗೂ ಮೊಬೈಲ್ ಕಾಣೆಯಾಗಿತ್ತು.
ಸ್ಕೂಟಿಯಲ್ಲಿದ್ದ ಎರಡು ಬ್ಯಾಗನ್ನು ಕಳ್ಳರು ಅಪಹರಿಸಿರುವುದ ಅವರ ಗಮನಕ್ಕೆ ಬಂದಿತು. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ಅವರು ದೂರು ಸಲ್ಲಿಸಿದರು. ಪಿಎಸ್ಐ ಮಯೂರ್ ಪಟ್ಟಣಶೆಟ್ಟಿ ಇದೀಗ ಆ ಬ್ಯಾಗ್ ಹುಡುಕಾಟ ನಡೆಸಿದ್ದಾರೆ.