ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಅರ್ಜುನನ ಲಾರಿ ಮೇಲೆತ್ತಲು ಮೂರನೇ ಹಂತದ ಕಾರ್ಯಾಚರಣೆ ಶುಕ್ರವಾರದಿಂದ ಶುರುವಾಗಿದೆ.
ಗೋವಾದಿಂದ ಡ್ರಜ್ಜಿಂಗ್ ಮಿಶನ್ ಬಂದಿದ್ದು, ಅದರ ಮೂಲಕ ಹಿಟಾಚಿ ಕರೆದೊಯ್ದು ನದಿ ಆಳದ ಮಣ್ಣನ್ನು ತೆಗೆಯಲಾಗುತ್ತಿದೆ. ಹಿಟಾಚಿ ಮಣ್ಣು ತೆಗೆಯುವ ಮುನ್ನ ಮುಳುಗು ತಜ್ಞರು ನದಿ ಆಳ ಪ್ರವೇಶಿಸಿ ಲಾರಿ ಇರುವ ಕಡೆ ಗುರುತು ಮಾಡಿಕೊಟ್ಟಿದ್ದಾರೆ. ಕಾರ್ಯಾಚರಣೆಗೆ ಅಗತ್ಯವಿರುವ ಟಗ್ ಬೊಟ್, ಹಿಟಾಚಿ ಹಾಗೂ ಇನ್ನಿತರ ಯಂತ್ರಗಳು ಸ್ಥಳದಲ್ಲಿವೆ. ಮುಳುಗು ತಜ್ಞ ಈಶ್ವರ ಮಲ್ಪೆ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದಾರೆ.
ಶುಕ್ರವಾರ ಶುರುವಾದ ಶಿರೂರು ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..