ಮುಂಡಗೋಡ: ನಾಲ್ಕು ತಿಂಗಳಿನಿoದ ಅನಾರೋಗ್ಯಕ್ಕೆ ಒಳಗಾಗಿದ್ದ ಸಯ್ಯದ ಮಕ್ಬುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಡಗೋಡು ಸುಭಾಶನಗರದ ಸಯ್ಯದ್ ಮಕ್ಬುಲ್ ಕೂಲಿ ಕೆಲಸ ಮಾಡಿಕೊಂಡಿದ್ದರು. ನಾಲ್ಕು ತಿಂಗಳಿನಿoದ ಮಾನಸಿಕವಾಗಿ ಕುಗ್ಗಿದ್ದರು. ಯಾವ ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ಅನಾರೋಗ್ಯದ ಕಾರಣ ಸದಾ ಬೇಸರದಲ್ಲಿರುತ್ತಿದ್ದರು.
ಡಿ 20ರಂದು ಅವರು ಮನೆಗೆ ಅಡ್ಡಲಾಗಿ ಹಾಕಿದ್ದ ಸಲಾಕೆಗೆ ನೇಣು ಬಿಗಿದುಕೊಂಡು ಸಾವನಪ್ಪಿದರು. ಪೊಲೀಸರು ಪರಿಶೀಲನೆ ನಡೆಸಿದ್ದು, ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಲಾಯಿತು. ಸಯ್ಯದ ಮಕ್ಬುಲ್ ಅವರ ಪುತ್ರಿ ಅಸ್ಮಿಯಾಭಾನು ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.