ಯಲ್ಲಾಪುರ: `ಕರ್ನಾಟಕವನ್ನು ಒಳಗೊಂಡು ಪ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮೊದಲಾದ ಕಡೆ ನಡೆದ ಉಪಚುನಾವಣೆಯಲ್ಲಿ ಆ ಪ್ರದೇಶದಲ್ಲಿ ಆಡಳಿತದಲ್ಲಿರುವ ಪಕ್ಷವೇ ಗೆಲುವು ಸಾಧಿಸಿದೆ. ಇದರಲ್ಲಿ ಯಾವುದೇ ಅಚ್ಚರಿಯಿಲ್ಲ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
`ಅಧಿಕಾರದಲ್ಲಿರುವ ಪಕ್ಷಕ್ಕೆ ಉಪಚುನಾವಣೆ ಅವಧಿಯಲ್ಲಿ ಜನ ಮನ್ನಣೆ ನೀಡುವುದು ಸಾಮಾನ್ಯ. ಇತ್ತೀಚೆಗೆ ನಡೆದ ಚುನಾವಣೆಯ ಎಲ್ಲಾ ಫಲಿತಾಂಶಗಳು ಆಡಳಿತಮಯವಾಗಿಯೇ ಹೊರಬಿದ್ದಿದೆ. ಮಹಾರಾಷ್ಟ್ರದ ಆಡಳಿತ ಪಕ್ಷ, ಮಹಾರಾಷ್ಟ್ರವನ್ನು ಉಳಿಸಿಕೊಂಡಿದೆ’ ಎಂದವರು ಹೇಳಿದ್ದಾರೆ.
`ಜಾರ್ಖಂಡ್ ಆಡಳಿತ ಜಾರ್ಖಂಡ್ ಉಳಿಸಿಕೊಂಡಿದೆ. ಕರ್ನಾಟಕ, ಪ.ಬಂಗಾಳ, ಬಿಹಾರ, ಯುಪಿ, ರಾಜಸ್ಥಾನ ಇತ್ಯಾದಿ ಅನೇಕ ರಾಜ್ಯಗಳಲ್ಲೂ ಅಲ್ಲಿನ ಆಡಳಿತ ಪಕ್ಷಗಳು ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಕುತಂತ್ರಗಳಿದ್ದರೆ, ಚುನಾವಣಾ ಆಯೋಗದ ಮುಂದೆ ಹೋರಾಟ ನಡೆಸಲು ಎಲ್ಲರಿಗೂ ಅವಕಾಶವಿದೆ’ ಎಂದು ರಾಮು ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.