ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಆಯುಷ್ ಆಸ್ಪತ್ರೆಯಲ್ಲಿ ಔಷಧಿ ಅಭಾವ ಎದುರಾಗಿದೆ. ಹೀಗಾಗಿ ಚಿಕಿತ್ಸೆ ಬಯಸಿ ಸರ್ಕಾರಿ ಆಯುಷ್ ಆಸ್ಪತ್ರೆಗೆ ಬಂದ ರೋಗಿಗಳು ಔಷಧಿ ಅರೆಸಿ ಖಾಸಗಿ ಔಷಧಾಲಯಕ್ಕೆ ತೆರಳುವುದು ಅನಿವಾರ್ಯವಾಗಿದೆ.
ಫೆ 3ರಂದು ಕುಮಟಾದ ಆಯುಷ್ ಆಸ್ಪತ್ರೆಗೆ ಮೇರಿ ಎಂಬಾತರು ಚಿಕಿತ್ಸೆಗೆ ತೆರಳಿದ್ದರು. ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರನ್ನು ಕರೆದೊಯ್ದಿದ್ದರು. ಚಿಕಿತ್ಸೆ ಮುಗಿದ ನಂತರ ಅವರಿಗೆ ಕೆಲ ಮಾತ್ರೆಗಳನ್ನು ವಿತರಿಸಲಾಯಿತು. ಆದರೆ, ಮಂಡಿನೋವಿಗೆ ಬೇಕಿರುವ ತೈಲ ಅಲ್ಲಿರಲಿಲ್ಲ.
ಈ ಬಗ್ಗೆ ಪ್ರಶ್ನಿಸಿದಾಗ ಖಾಸಗಿ ಔಷಧಿ ಮಳಿಗೆಯಲ್ಲಿ ಪಡೆಯುವಂತೆ ಆರೋಗ್ಯ ಸಿಬ್ಬಂದಿ ಸೂಚಿಸಿದರು. `ಟೆಂಡರ್ ಆಗದ ಕಾರಣ ಜಿಲ್ಲಾ ಪಂಚಾಯತದಿoದ ಔಷಧಿ ಸರಬರಾಜು ಆಗಿಲ್ಲ’ ಎಂದು ವೈದ್ಯರು ಉತ್ತರಿಸಿದರು. ಈ ಬಗ್ಗೆ ತಕ್ಷಣ ಆಗ್ನೇಲ್ ರೋಡ್ರಿಗಸ್ ಅವರು ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿದ್ದು, ಅವರು ಸಭೆಯಲ್ಲಿದ್ದರು.
ಹೀಗಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಆಗ್ನೇಲ್ ರೋಡ್ರಿಗಸ್ ಅವರು ಮೆಸೆಜ್ ಮೂಲಕ ಸಮಸ್ಯೆ ಬಗ್ಗೆ ವಿವರಿಸಿದರು. ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದು, ಇದಕ್ಕೆ ಪ್ರಮುಖರಾದ ಮುನ್ನ ಸಾಬ್, ವಿಠ್ಠಲ್ ನಾಯ್ಕ್, ಸುಧಾಕರ್ ನಾಯ್ಕ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಕೂಡಲೇ ಔಷಧ ಪೂರೈಕೆ ಮಾಡುವಂತೆ ಆಗ್ರಹಿಸಿದರು.