ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ನಿಧನದಿಂದ ಸಾಲುಮರದ ತಿಮ್ಮಕ್ಕ ಆಘಾತಕ್ಕೆ ಒಳಗಾಗಿದ್ದಾರೆ. `ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕುಟುಂಬದವರoತೆ ತುಳಸಿ ಗೌಡ ಜೊತೆಯಿದ್ದರು’ ಎಂದವರು ಸ್ಮರಿಸಿದ್ದಾರೆ.
`ತುಳಸಿ ಗೌಡ ಹಾಗೂ ಸಾಲುಮರದ ತಿಮ್ಮಕ್ಕ ಇಬ್ಬರು ಅಕ್ಕ-ತಂಗಿಯ ಹಾಗೇ ಒಡನಾಟ ಹೊಂದಿದ್ದರು. ತುಳಸಿ ಗೌಡ ಅವರು ನಿಧನರಾದ ಸುದ್ದಿ ಕೇಳಿ ತಿಮ್ಮಕ್ಕ ಅವರು ದುಖಿ:ತರಾಗಿದ್ದಾರೆ’ ಎಂದು ಸಾಲುಮರದ ತಿಮ್ಮಕ್ಕ ಅವರ ಪುತ್ರ ವನಸಿರಿ ಉಮೇಶ್ ಹೇಳಿದ್ದಾರೆ.
`ತುಳಸಿ ಗೌಡ ಅವರು ಮತ್ತೊಮ್ಮೆ ಈ ನೆಲದಲ್ಲಿ ಹುಟ್ಟಿ ಬರಲಿ. ಅವರ ಆದರ್ಶಗಳು ಪ್ರೇರಣೆಯಾಗಲಿ. ಪರಿಸರ ಕಾಪಾಡುವಲ್ಲಿ ಅವರ ನಡೆ ನಮ್ಮೆಲ್ಲರಿಗೂ ಸದಾ ಮಾದರಿಯಾಗಿರಲಿ’ ಎಂದವರು ಬರೆದುಕೊಂಡಿದ್ದಾರೆ.