ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರ ಧಾರ್ಮಿಕ ಭಕ್ತಿಯನ್ನು ದುರುಪಯೋಗಪಡಿಸಿಕೊಂಡಿದನ್ನು ಖಂಡಿಸಿರುವ ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ರಾಜಕೀಯ ಕುತಂತ್ರದ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
`ಕೆಲವರ ಕುತಂತ್ರ ರಾಜಕಾರಣದ ಪರಿಣಾಮ ತಿರುಪತಿ ಲಡ್ಡು ಅಪವಿತ್ರಗೊಂಡಿದ್ದು, ದುಷ್ಠಶಕ್ತಿಗಳಿಗೆ ಭಕ್ತರೇ ಬುದ್ದಿ ಕಲಿಸಬೇಕು’ ಎಂದವರು ಹೇಳಿದ್ದಾರೆ. `ನಾವು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಿದ್ದ ಲಡ್ಡುವಿನಲ್ಲಿ ದನ ಹಾಗೂ ಹಂದಿಗಳ ಕೊಬ್ಬು ಸೇರಿಸಲಾಗುತ್ತಿತ್ತು ಎಂಬುದು ಅತ್ಯಂತ ಆಘಾತಕಾರಿ ವಿಷಯ. ಆಂದ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ, ಜಗನ್ ಮೋಹನ ರೆಡ್ಡಿ ಅವರ ಕೈವಾಡದಿಂದ ಈ ಕೃತ್ಯ ನಡೆದಿದೆ. ಕ್ರಿಸ್ತ ಸಮುದಾಯದ ಸೋನಿಯಾ, ರಾಹುಲ್ ಪ್ರಿಯಾಂಕರAತೆ ಈ ರೆಡ್ಡಿಗಳು ಸಹ ಹಿಂದೂ ಧರ್ಮದವರ ಭಾವನೆ ಜೊತೆ ಆಟವಾಡಿದ್ದಾರೆ’ ಎಂದವರು ಹೇಳಿದ್ದಾರೆ.
`ಸ್ವಾತಂತ್ರ್ಯ ಪೂರ್ವದ 1857ರ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸಹ ಇಂಥ ಪ್ರಯತ್ನ ನಡೆದಿತ್ತು. ಆಗ ದನ ಹಾಗೂ ಹಂದಿಗಳ ಕೊಬ್ಬನ್ನು ಸವರಿದ ಬಂದೂಕಿನ ತೋಟಾಗಳನ್ನು ಬಳಸಿ ಹಿಂದೂ ಸೈನಿಕರಿಗೆ ತೊಂದರೆ ನೀಡಲಾಗಿತ್ತು. ಆ ವೇಳೆ ನಡೆದ ಸಿಫಾಯಿ ದಂಗೆ ಹೋರಾಟವನ್ನು ಮರೆಯುವಂತಿಲ್ಲ. ಪ್ರಸ್ತುತ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದವರ ವಿರುದ್ಧವೂ ಅಂಥ ಹೋರಾಟ ಅಗತ್ಯ’ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.