ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಯರ್ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮಂಜುನಾಥ ಗುನಗಾ ವಿರುದ್ಧ ಪೊಲೀಸರು ಕಠಿಣ ಕ್ರಮ ಅನುಸರಿಸಿದ್ದಾರೆ.
ಕಾರವಾರದ ಅಮದಳ್ಳಿ ಮಹದೇವವಾಡದಲ್ಲಿ ಮಂಜುನಾಥ ಗುನಗಾ ಅಂಗಡಿ ಹೊಂದಿದ್ದಾರೆ. ಈ ಅಂಗಡಿಯಲ್ಲಿ ಅವರು ಕರ್ನಾಟಕ ರಾಜ್ಯದ ಬಿಯರ್ ಬಾಟಲಿಗಳನ್ನು ದಾಸ್ತಾನು ಮಾಡಿಕೊಂಡಿದ್ದರು. ಆದರೆ, ಇದಕ್ಕೆ ಅವರು ಯಾವುದೇ ಅನುಮತಿ ಪಡೆದಿರಲಿಲ್ಲ.
ಗರಿಷ್ಟ ಮಾರಾಟ ದರವನ್ನು ಮೀರಿ ಹೆಚ್ಚಿನ ಬೆಲೆಗೆ ಅವರು ಆ ಬಿಯರ್ ಬಾಟಲಿಗಳನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ಹಗಲು-ರಾತ್ರಿ ಎನ್ನದೇ ಎಷ್ಟೇ ಹೊತ್ತಿಗೆ ತೆರಳಿದರೂ ಕಾಸು ಕೊಟ್ಟವರಿಗೆ ಅವರು ಮದ್ಯ ಕೊಡುತ್ತಿದ್ದರು.
ಈ ಬಗ್ಗೆ ಅರಿತ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಪಾಟೀಲ ಫೆ 16ರಂದು ಅಂಗಡಿ ಮೇಲೆ ದಾಳಿ ನಡೆಸಿದರು. ಆಗ ಅಲ್ಲಿ 6215ರೂ ಮೌಲ್ಯದ ಬಿಯರ್ ಬಾಟಲಿಗಳು ಸಿಕ್ಕವು. ಮಂಜುನಾಥ ಗುನಗಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.