ಹೊನ್ನಾವರ: ಜಾನುವಾರುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲಿನ ದಾಳಿಗೆ ಮುನ್ನುಡಿಯಿಟ್ಟಿದೆ. ಮನುಷ್ಯನ ಮಾಂಸನ ರುಚಿ ನೋಡಿದ ಚಿರತೆ ಮತ್ತೆ ಎಂದಿಗೂ ಬೇರೆ ಜೀವಿಯನ್ನು ಭಕ್ಷಿಸುವುದಿಲ್ಲ. ಹೀಗಾಗಿ ನರಭಕ್ಷಕ ಚಿರತೆಯ ಬಗ್ಗೆ ಹೊನ್ನಾವರದಲ್ಲಿ ಆತಂಕ ಹುಟ್ಟಿಕೊಂಡಿದೆ.
ಸoತೇಗುಳಿ ಸಮೀಪ ಒಂಟಿಯಾಗಿ ತೆರಳುತ್ತಿದ್ದ ಪ್ರಶಾಂತ ಭಟ್ಟರ ಮೇಲೆ ಚಿರತೆ ದಾಳಿ ನಡೆಸಿದೆ. ಕೆರೆಕೋಣದ ಶಿಕ್ಷಕ ಪ್ರಶಾಂತ ಭಟ್ಟರ ಕಾಲಿಗೆ ಚಿರತೆ ತನ್ನ ಉಗುರು ಹಾಗೂ ಹಲ್ಲಿನ ಸ್ಪರ್ಶ ಮಾಡಿದೆ. ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಚಿರತೆ ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಬೈಕಿನ ವೇಗ ಹೆಚ್ಚಿಸಿ ಬಚಾವಾಗಿದ್ದಾರೆ.
ಸಾಲ್ಕೋಡ್ ಗ್ರಾಮದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಒಂದು ವರ್ಷದಲ್ಲಿ ಆರು ಸಲ ಜನರ ಮೇಲೆ ವನ್ಯಜೀವಿ ಮೇಲೆ ದಾಳಿ ನಡೆಸಿದೆ.