ಕುಮಟಾ: ತದಡಿ-ಗಂಗಾವಳಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಲ್ಲಿನ ರಾಶಿ ಕಾಣುತ್ತಿದೆ. ಚೌಡಗೇರಿ ಬಳಿಯ ಗ್ಯಾರೇಜಿನಲ್ಲಿದ್ದ ಬೈಕನ್ನು ಕಿಡಿಗೇಡಿಗಳು ಕಲ್ಲಿನಿಂದ ಕುಟ್ಟಿದ್ದಾರೆ.
ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಮಾರ್ಗದಲ್ಲಿ ಸಂಚಾರ ನಡೆಸಿದ್ದು, ತಮ್ಮ ವಿದ್ವಂಸಕ ಕೃತ್ಯಗಳನ್ನು ಪ್ರದರ್ಶಿಸಿದ್ದಾರೆ. ಬುಧವಾರ ಬೆಳಗ್ಗೆ ರಸ್ತೆ ಮೇಲೆ ಚೀರೆಕಲ್ಲುಗಳು ಬಿದ್ದಿರುವುದನ್ನು ನೋಡಿದ ಜನ ಆತಂಕಕ್ಕೆ ಒಳಗಾದರು. `ಯಾವುದಾದರೂ ಕಪೌಂಡ್ ಗೋಡೆ ಮುರಿದು ಬಿತ್ತೆ?’ ಎಂದು ಪರಿಶೀಲಿಸಿದರು.
ಅದಾದ ನಂತರ ರಿಪೇರಿಗಾಗಿ ಗ್ಯಾರೇಜಿಗೆ ಬಂದಿದ್ದ ಬೈಕಿನ ಮೇಲೆಯೂ ಕಿಡಿಗೇಡಿಗಳು ಅಟ್ಟಹಾಸ ಮೆರೆದಿರುವುದು ಗೊತ್ತಾಯಿತು. `ರಸ್ತೆ ಮೇಲೆ ಕಲ್ಲು ಹಾಕಿರುವುದು ಸಹ ಅವರದ್ದೇ ಕೆಲಸ’ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು.