ಭಟ್ಕಳ: ಮೂರು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಕೇರಳದ ನಿವೃತ್ತ ನೌಕರ ರಾಮಚಂದ್ರ ಕೇಣಿ ಅವರು ನ 25ರಂದು ಮಂಗಳೂರಿನಿoದ ಹೊನ್ನಾವರದ ಕಡೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಅವರ ಕಾರಿನಲ್ಲಿ ಒಂದೇ ಕುಟುಂಬದ ನರಸಿಂಹ ಭಟ್ಟ, ನಿವೇದಿತಾ ಭಟ್ಟ ಹಾಗೂ ವೈಷ್ಣವಿ ಭಟ್ಟ ಸಹ ಇದ್ದರು.
ಮುರುಡೇಶ್ವರದ ನ್ಯಾಶನಲ್ ಕಾಲೋನಿ ಕಡೆಯಿಂದ ವೇಗವಾಗಿ ಕಾರು ಓಡಿಸಿಕೊಂಡು ಬಂದ ಸಿದ್ದಾಪುರದ ಮಹ್ಮದ್ ಸಾಬ್ ರಾಮಚಂದ್ರ ಕೇಣಿ ಅವರ ಕಾರಿಗೆ ಡಿಕ್ಕಿ ಹೊಡೆದರು. ಬಸ್ತಿಮಕ್ಕಿ ಕ್ರಾಸ್ ಹತ್ತಿರ ನಡೆದ ಈ ಅಪಘಾತ ರಾಮಚಂದ್ರ ಕೇಣಿ ಅವರು ಗಾಯಗೊಂಡರು. ಜೊತೆಗೆ ಅವರ ಕಾರಿನಲ್ಲಿದ್ದ ಮೂವರು ಗಾಯಗೊಂಡರು.
ಕೇಣಿ ಅವರಿಗೆ ಗುದ್ದಿದ ಕಾರು ನಂತರ ಇನ್ನೊಂದು ಕಾರಿಗೆ ಡಿಕ್ಕಿಯಾಗಿದ್ದು, ಸರಣಿ ಅಪಘಾತ ನಡೆಸಿದ ಮಹ್ಮದ್ ಸಾಬ್ ವಿರುದ್ಧ ರಾಮಚಂದ್ರ ಕೇಣಿ ಪೊಲೀಸ್ ದೂರು ನೀಡಿದರು.