ಸಾಗರದ ವರದಪುರದಲ್ಲಿ ಶ್ರೀಧರ ಸ್ವಾಮಿಗಳ 52ನೇ ಆರಾಧನೆ ಏಪ್ರಿಲ್ 13ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಇದಕ್ಕಾಗಿ ಶ್ರೀಧರ ಸೇವಾ ಮಹಾಮಂಡಳ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡಿದೆ. ಮೂರು ದಿನಗಳ ಕಾಲ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಏ 13ರಂದು ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಪ್ರಾಯಶ್ಚಿತ್ತ ಪೂರ್ವಕ ಋತ್ವಿಗ್ವರಣ, ಯಾಗಶಾಲಾ ಪ್ರವೇಶ, ಗಣಪತಿ ಮೂಲಮಂತ್ರ ಹವನ, ಗಂಗಾಮAತ್ರ ಹವನ, ಸಂಜೆ ಪಾಲಕಿ ಉತ್ಸವ ಮತ್ತು ಅಷ್ಟಾವಧಾನ ಸೇವೆ ನಡೆಯಲಿದೆ. ಏ.15ರಂದು ಶ್ರೀ ಸೂಕ್ತ ಹವನ, ಶ್ರೀ ಗುರು ಮೂಲಮಂತ್ರ ಹವನ, ಪೂರ್ಣಾಹುತಿ, ಸಂಜೆ ಪಾಲಕಿ ಉತ್ಸವ ಮತ್ತು ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ, ಫಲಮಂತ್ರಾಕ್ಷತೆ ವಿತರಣೆ ಜರುಗಲಿದೆ.
ಅದಾದ ನಂತರ ವೇದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ನಡೆಯಲಿದೆ. ತನು, ಮನ, ಧನ ಸಹಕಾರ ನೀಡಿ ಭಕ್ತರು ಉತ್ಸವದಲ್ಲಿ ಭಾಗವಹಿಸುವಂತೆ ಶ್ರೀಧರ ಸೇವಾ ಮಹಾಮಂಡಳ ಮನವಿ ಮಾಡಿದೆ.