ಶಿರಸಿ: ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದು ಅದನ್ನು ತೀರಿಸದ ಹಾಗೂ ಜಾಮೀನುದಾರನಿಗೆ ಶಿರಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಶ್ರೀನಿವಾಸ ಸೋಮರಾಜ್ ಎಂಬಾತರು 70 ಸಾವಿರ ರೂ ಸಾಲ ಪಡೆದಿದ್ದರು. ಆದರೆ, ಅದನ್ನು ಮರುಪಾವತಿ ಮಾಡಿರಲಿಲ್ಲ. ನೋಟಿಸ್ ನೀಡಿದ್ದರೂ ಆ ಬಗ್ಗೆ ಗಮನಿಸಿರಲಿಲ್ಲ. ಹೀಗಾಗಿ ಜಾಮೀನುದಾರರಾದ ವಿನೋದ ಹರಿಜನ ಅವರಿಗೂ ಸೊಸೈಟಿಯವರು ನೋಟಿಸ್ ನೀಡಿದ್ದರು. ಅವರು ಸಹ ಸಾಲ ಮರುಪಾವತಿ ಮಾಡಿರಲಿಲ್ಲ.
ಜಾಮೀನುದಾರ ನೀಡಿದ್ದ ಚೆಕ್ ಆಧಾರದಲ್ಲಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಅಭಿಷೇಕ ರಾಮಚಂದ್ರ ಜೋಶಿ ಸಾಲ ಮರಳಿಸದ ಕಾರಣ ಜಾಮೀನುದಾರ ಹಾಗೂ ಸಾಲ ಪಡೆದಿರುವ ವ್ಯಕ್ತಿಗೆ ಬಿಸಿ ಮುಟ್ಟಿಸಿದೆ. `ಒಟ್ಟು 90 ಸಾವಿರ ರೂ ಹಣವನ್ನು ಸೊಸೈಟಿಗೆ ಪಾವತಿಸಬೇಕು’ ಎಂದು ಸೂಚಿಸಿದೆ. ಜೊತೆಗೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ನ್ಯಾಯಾಲಯ ಆದೇಶಿಸಿದೆ.
ದೂರುದಾರ ಸಂಘದ ಪರವಾಗಿ ನ್ಯಾಯವಾದಿ ಪ್ರಶಾಂತ ನಾಯ್ಕ ವಾದ ಮಂಡಿಸಿದರು