ಸಿದ್ದಾಪುರ: ಗುರುವಾರ ಸಂಜೆಯಿoದ ಜಿಲ್ಲೆಯ ವಿವಿಧ ಕಡೆ ಗುಡುಗು-ಮಳೆ ಶುರುವಾಗಿದೆ.
ಸಿದ್ದಾಪುರ ತಾಲೂಕಿನ ಬೇಡ್ಕಣಿಯಲ್ಲಿ ಸಿಡಿಲು ಬಡಿದಿದೆ. ಪರಿಣಾಮ ದಯಾನಂದ ನಾಯ್ಕ ಅವರ ಮನೆಯಲ್ಲಿದ್ದ ವಿವಿಧ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ಸಂಜೆ ವೇಳೆ ಮನೆ ಮೇಲೆ ಸಿಡಿಲು ಬಡಿದಿದ್ದು, ಮನೆ ಒಳಭಾಗದಲ್ಲಿಯೂ ವಿದ್ಯುತ್ ಪ್ರವಹಿಸಿದೆ. ಇದರಿಂದ ಟಿವಿ, ಮನೆಯ ವೈಯರ್ ಸುಟ್ಟಿವೆ. ಯಾವುದೇ ಜೀವಾಪಾಯ ಆಗಿಲ್ಲ.