ಮುಂಡಗೋಡ: ಟಿಬೇಟಿಯನ್ ಕಾಲೋನಿಗೆ ಕೆಲಸಕ್ಕೆ ಹೋದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ.
ನಂದಿಕಟ್ಟಾದ ಚಂದ್ರಕ್ಕ ಸುಂಕಪ್ಪ ದುರಮುರ್ಗಿ (35) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ನ 25ರಂದು ಅವರು ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಸಹ ಅಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ, ಸಂಜೆ ಅವರು ಮನೆಗೆ ಮರಳಿಲ್ಲ.
ಚಂದ್ರಕ್ಕ ಅವರನ್ನು ಎಲ್ಲಾ ಕಡೆ ಹುಡುಕಲಾಯಿತು. ಆದರೂ, ಅವರು ಸಿಕ್ಕಿಲ್ಲ. ಈ ಹಿನ್ನಲೆ ಅವರ ಮಗ ನಾಗರಾಜ ದುರಮುರ್ಕಿ ಪೊಲೀಸ್ ದೂರು ನೀಡಿದ್ದಾರೆ.