ಸುರಕ್ಷಿತ ಪ್ರವಾಸೋದ್ಯಮಕ್ಕಾಗಿ ಸರ್ಕಾರ ಹಲವು ನಿಯಮ ರೂಪಿಸಿದ್ದು, ಸಾಹಸ ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಗೆ ನೋಂದಣಿ ಕಡ್ಡಾಯ ಮಾಡಿದೆ. ಎಲ್ಲ ಸಾಹಸ ಚಟುವಟಿಕೆಗಳನ್ನು ನಡೆಸುವ ಹೋಟೆಲ್, ರೆಸಾರ್ಟ, ಹೋಂ ಸ್ಟೇ, ಇತರೆ ಸಾಹಸ ಕ್ರೀಡೆ ನಡೆಸುವ ಸಂಸ್ಥೆಗಳು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಮಾಹಿತಿ ಲಭ್ಯವಿದ್ದು, ಕಚೇರಿ ಅವಧಿಯಲ್ಲಿ 08382-221172 ಸಂಪರ್ಕಿಸಬಹುದಾಗಿದೆ.
Discussion about this post