ಶಿರಸಿಯಲ್ಲಿ ಗುಜುರಿ ಸಾಮಗ್ರಿ ಒಯ್ಯುವ ಟಾಕ್ಟರ್ ಟೈಯರ್ ಸ್ಪೋಟಗೊಂಡ ಪರಿಣಾಮ ಸೋಮವಾರ ಸಂಜೆ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆ ಪೈಕಿ ಒಬ್ಬರು ಸಾವನಪ್ಪಿದ್ದಾರೆ.
`ನಾಗಲಿಂಗ ಟ್ರೇರ್ಸ’ ಎಂಬ ಟಾಕ್ಟರಿನವರು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿರುವ ಸುಂಕದ ವಾಲ್ಕ್ ನೈಸಿಂಗ್ ಅಂಗಡಿಗೆ ಬಂದಿದ್ದರು. ಟಾಕ್ಟರ್ ಟೈಯರಿಗೆ ಗಾಳಿ ತುಂಬಿದ ನಂತರ ಗಾಳಿಯ ಪ್ರಮಾಣ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಟಾಕ್ಟರಿನ ಟೈಯರ್ ಸ್ಪೋಟಗೊಂಡಿತ್ತು.
ಪರಿಣಾಮ ಹಾನಗಲ್’ನ ಶಶಿಕುಮಾರ ಕೊಂಡೋಜಿ ಹಾಗೂ ಸಿದ್ದಪ್ಪ ಎಂಬಾತರು ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿರುವ ಗಾಯಾಳು ನೋಡಿದ ಜನ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಈ ದಿನ ಶಶಿಕುಮಾರ್ ಕೊಂಡೋಜಿ ಸಾವನಪ್ಪಿದ್ದಾರೆ.
`ಸಂಕದ ಟೈರ್ಸ ಮಾಲಕ ಮಹ್ಮದ್ ಅಸ್ಲಂ ಸರಿಯಾದ ಸಮಯಕ್ಕೆ ಟಾಕ್ಟರ್ ಚಕ್ರಕ್ಕೆ ಗಾಳಿ ತುಂಬಲು ಬರಲಿಲ್ಲ. ಶಶಿಕುಮಾರ್ ಬಳಿ ಗಾಳಿ ತುಂಬಿಕೊಳ್ಳಲು ಸೂಚಿಸಿದ್ದು, ಅದರ ಪರಿಣಾಮ ಸ್ಪೋಟ ಸಂಭವಿಸಿದೆ’ ಎಂದು ಗುಜುರಿ ಕೆಲಸ ಮಾಡುವ ಅಕ್ಷಯ ಗೋಸಾವಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.