ಭಟ್ಕಳ: ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರನ್ನು ಕಂಡ ಗೋ ಭಕ್ಷಕರು ರಿಕ್ಷಾ ಬಿಟ್ಟು ಪರಾರಿಯಾಗಿದ್ದಾರೆ. ರಿಕ್ಷಾದಲ್ಲಿದ್ದ 168 ಕೆಜಿ ಗೋಮಾಂಸದ ಜೊತೆ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನ ಸಮೀಪ ರಿಕ್ಷಾಗೆ ಅಡ್ಡಲಾಗಿ ಭಟ್ಕಳ ನಗರಠಾಣೆ ಪೊಲೀಸರು ಕೈ ಮಾಡಿದರು. ಆಗ ರಿಕ್ಷಾದಲ್ಲಿದ್ದ ಎ ಡಿ ಅಶ್ಪಾಕ್, ಶಾಹೀದ್, ಶಾಕೀರ ಮಹಮ್ಮದ್ ಓಡಿ ಪರಾರಿಯಾದರು. ದನಗಳನ್ನು ಕದ್ದ ಆರೋಪಿತರು ಗೋ ವಧೆ ನಡೆಸಿ ಅದರ ಮಾಂಸ ತೆಗೆದಿದ್ದರು. ಗೋ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಚೀಲದಲ್ಲಿ ತುಂಬಿಕೊAಡು ಸಾಗಿಸುತ್ತಿದ್ದರು.
ಭಟ್ಕಳ ನಗರ ಠಾಣೆಯ ಪಿಎಸ್ಐ ತಿಮ್ಮಪ್ಪ ಎಸ್ ದಾಳಿ ನಡೆಸಿ ಅವರ ಸಂಚನ್ನು ಬಯಲಿಗೆಳೆದರು. 67280 ರೂ ಮೌಲ್ಯದ ಗೋ ಮಾಂಸ ರಿಕ್ಷಾದಲ್ಲಿ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಠಾಣೆಯ ಪಿಎಸ್ಐ ಸೋಮರಾಜ ರಾಠೋಡ ತನಿಖೆ ಮುಂದುವರೆಸಿದ್ದಾರೆ.