ಶಿರಸಿ ಮಂಜುಗುಣಿಯ ವೆಂಕಟರಮಣ ದೇವಸ್ಥಾನದ ಮೂಲ ನೆಲೆಯಾದ ಗಿಳಲುಗುಂಡಿಯಲ್ಲಿ ಫೆ 4ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೇ 7ರವರೆಗೆ ಈ ಕಾರ್ಯಕ್ರಮಗಳು ನಡೆಯಲಿದೆ.
ಫೆ 4ರಂದು ಗಿಳಲುಗುಂಡಿಯಲ್ಲಿ ಗಿಳಿಗುಂಡಿ ಉತ್ಸವ, ಅಶ್ವರಥೋತ್ಸವ ಹಾಗೂ ಫೆ 5ರಂದು ಮಂಜುಗುಣಿಯಲ್ಲಿ ಉದ್ಯಾಪನಾ ಉತ್ಸವ ಪರ್ವ ನಡೆಯಲಿದೆ. ಅಂದು ದೇವರ ಪ್ರಧಾನ ಉತ್ಸವ ಮೂರ್ತಿಯೂ ಬೆಳಿಗ್ಗೆ 8.30ಕ್ಕೆ ಗಿಳಲುಗುಂಡಿಗೆ ಮೌನಯಾತ್ರೆ ಮೂಲಕ ಸವಾರಿ ಹೊರಡಲಿದೆ. 10.30ರಿಂದ ದೇವರ ಮೂಲಸ್ಥಾನದಲ್ಲಿ ಪೂಜೆ, ಗೋಪೂಜೆ, ಚಕ್ರಮೂರ್ತಿಗೆ ಶತಧಾರಾ ಕ್ಷೀರಾಭಿಷೇಕ, ತಿರುಮಲಯೋಗಿಗಳ ಪಾದಾಂಕಿತ ಪೂಜೆ, ಗೋಪಾದ ಚಿಹ್ನೆ ಪೂಜೆ, ಗುಹಾಪೂಜೆ, ಶ್ರೀ ವೇಂಕಟೇಶ ಮೂಲಮಂತ್ರ ಹಾಗೂ ಗಾಯತ್ರಿ ಮಂತ್ರ ಹೋಮ, ಶ್ರೀಸೂಕ್ತ ಪುರುಷಸೂಕ್ತ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ ಕಥಾ ಪೂಜಾ, ಸಹಸ್ರನಾಮ, ಮಹಾನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಭೋಜನ, ಮಧ್ಯಾಹ್ನ ಪೂಜೆ, 3:30ರಿಂದ ಭೇರಿತಾಡನ, ಶ್ರೀದೇವರ ಅಶ್ವರಥಾರೋಹಣ, ಬಿಜಯಂಗೈಯುವುದು (ವಿಜಯಯಾತ್ರಾ) ಸಂಜೆ 7 ಗಂಟೆಗೆ ಪುರಪ್ರವೇಶ, ಆಲಯ ಪ್ರವೇಶ, ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ.
ಫೆ.5 ರಂದು ಮಂಜುಗುಣಿಯಲ್ಲಿ ದೇವಸ್ಥಾನದಲ್ಲಿ ಶ್ರೀದೇವರಲ್ಲಿ ಬೆಳಗ್ಗೆ 7 ಗಂಟೆಯಿoದ ಪೂಜಾರಂಭ, 9.30ಕ್ಕೆ ದೇವರಿಗೆ ಮಹಾಪೂಜೆ, 11ಗಂಟೆಗೆ ಶ್ರೀ ದೇವರಿಗೆ ಬೆಳ್ಳಿ-ಬಂಗಾರಗಳಿoದ ತುಲಾಭಾರ ನಡೆಯಲಿದೆ. ಐತಿಹಾಸಿಕವಾದ ಈ ತುಲಾಭಾರ ಸೇವೆಯಲ್ಲಿ ಭಕ್ತರು ಸ್ವಹಸ್ತದಿಂದ ಬೆಳ್ಳಿ ಬಂಗಾರಗಳನ್ನು ತುಲಾಭಾರ ಪಾತ್ರೆಗೆ ಅರ್ಪಿಸಲು ಅವಕಾಶವಿದೆ. 1 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ರಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ವೇಂಕಟೇಶ ದೇವರಿಗೆ ಆತ್ಮಕಲ್ಯಾಣ, ಕುಟುಂಬ ಕಲ್ಯಾಣ, ಲೋಕ ಕಲ್ಯಾಣೋತ್ಸವ ಸೇರಿ ತ್ರಿವಿಧ ಕಲ್ಯಾಣ ನಡೆಯಲಿದೆ. ಸಂಜೆ 4.30ರಿಂದ ನಿತ್ಯಪೂಜೆ, 5 ಗಂಟೆಗೆ ಸ್ವಾಮಿಗೆ ಕಲ್ಯಾಣೋತ್ಸವ ಆರಂಭವಾಗಲಿದೆ. ಬಳಿಕ ಪಟ್ಟಗಾಣಿಕೆ ಸಮರ್ಪಣೆ, ಪ್ರಪಂಚ ಪುಷ್ಪಾಂಜಲಿ ನಂತರ ಡೋಲೋತ್ಸವ (ಉಯ್ಯಾಲೆ), 8 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಫೆ 6ರಂದು ಶ್ರೀನಿವಾಸ ಸಾಮ್ರಾಜ್ಯ ಪಟ್ಟಬಂಧ ಮಹೋತ್ಸವವಿದೆ.
ಶ್ರೀದೇವರಲ್ಲಿ ಬೆಳಗ್ಗೆ 7 ಗಂಟೆಯಿAದ ಪೂಜಾರಂಭ, 9.30ಕ್ಕೆ ದೇವರಿಗೆ ಮಹಾಪೂಜೆ, 10.15ಕ್ಕೆ ವೇದಿಕೆಗೆ ಶ್ರೀದೇವರ ಆಗಮನ, ಪೂಜಾರಂಭ, ವಿವಿಧ ದ್ರವ್ಯಗಳಿಂದ ಅಭಿಷೇಕ, ಮುಹೂರ್ತ ವಾಚನ- ದರ್ಶನ, ರಾಜೋಪಚಾರ, ಪಟ್ಟಗಾಣಿಕೆ ಸಮರ್ಪಣೆ, ಭೂದಾನ, ಮಹಾಮಂಗಳಾರತಿ. 1 ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ 2ರಿಂದ ಮನರಂಜನಾ ಕಾರ್ಯಕ್ರಮ, ಸಂಜೆ 5 ಗಂಟೆಯಿoದ ಸಾಮೂಹಿಕ ಪ್ರಾರ್ಥನೆಯೊಂದಿಗೆ ನೌಕಾವಿಹಾರೋತ್ಸವ ಪ್ರಾರಂಭವಾಗಲಿದೆ. ತೀರ್ಥ-ತೀರ-ವಿಹಾರ, ತೀರ್ಥಾರತಿ, ಆಲಯಪ್ರವೇಶದೊಂದಿಗೆ ಉತ್ಸವ ಸಂಪನ್ನವಾಗಲಿದೆ. 8 ಗಂಟೆಗೆ ಮಹಾಪ್ರಸಾದ ವಿತರಣೆ ಇದೆ.
ಫೆ 7ರಂದು ಶ್ರೀದೇವರಲ್ಲಿ ಬೆಳಿಗ್ಗೆ 7 ಗಂಟೆಯಿAದ ಪೂಜಾರಂಭ, 9.30 ಕ್ಕೆ ಶ್ರೀದೇವರಿಗೆ ಮಹಾಪೂಜೆ, 10 ಗಂಟೆಗೆ ವೇದಿಕೆಯಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತಕಥಾ ಪೂಜಾರಂಭ ಹಾಗೂ ಶ್ರೀದೇವಸ್ಥಾನದಲ್ಲಿ ಪ್ರಾಕಾರ ಬಲಿ ಉತ್ಸವ ಪ್ರಾರಂಭ, ಏಕಾಂತ ಸೇವೆ, ಭಾಗವತ ಸೇವೆ, ರಥಾರೋಹಣ, ದರ್ಶನ, ಸಾಮೂಹಿಕ ಸತ್ಯನಾರಾಯಣ ವ್ರತಕಥಾ ಪೂಜೆಯ ಮಹಾಮಂಗಳಾರತಿ, ಕಥಾಶ್ರವಣ, ಪ್ರಸಾದ ವಿತರಣೆ, 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ.
ಈ ವಿಷಯದ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಾಹಿತಿ ನೀಡಿದರು. ಪ್ರಮುಖರಾದ ಎಂ ಎನ್ ಹೆಗಡೆ ಕೂರ್ಸೆ, ಅನಂತ ಪೈ, ನಾಗೇಂದ್ರ ಶೇಟ್ ಇದ್ದರು.