ದುಡ್ಡು ಬೆಳೆಯಬೇಕು ಎಂದರೆ ಅದನ್ನು ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದಲ್ಲಿ ಹೂಡಿಕೆ ಮಾಡಬೇಕು. ಅಗತ್ಯಕ್ಕೆ ಅನುಗುಣವಾಗಿ ಸಾಲ ಬೇಕು ಎಂದರೂ ಯೋಗ್ಯ ಬ್ಯಾಂಕ್ ಹುಡುಕಬೇಕು. ಈ ಎರಡು ಕೆಲಸಗಳಿಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸೇವೆ ನೀಡುತ್ತಿರುವ ಯುಕೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಉತ್ತಮ ಆಯ್ಕೆ. ಸೇವಾ ಮನೋಭಾವನೆಯ ಸಿಬ್ಬಂದಿ, ನ್ಯಾಯಯುತ ಬೇಡಿಕೆಗಳಿಗೆ ಸ್ಪಂಧಿಸುವ ಆಡಳಿತ ವರ್ಗ, ಲಕ್ಷ ಸಂಖ್ಯೆಯಲ್ಲಿರುವ ಸಂತೃಪ್ತ ಗ್ರಾಹಕರು ಬ್ಯಾಂಕಿನ ಯಶಸ್ಸಿಗೆ ಕಾರಣ.
2001ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಸ್ತುತ 10 ಶಾಖೆಯನ್ನು ಹೊಂದಿದೆ. ಕುಮಟಾ, ಶಿರಸಿ, ಸಿದ್ದಾಪುರ, ದಾಂಡೇಲಿ, ಮುಂಡಗೋಡ, ಹೊನ್ನಾವರ ತಾಲೂಕುಗಳಲ್ಲಿ ಸೇವೆ ದೊರೆಯುತ್ತದೆ. ಎಲ್ಲಾ ರೀತಿಯ ವಿಮೆ, ಪ್ರಯಾಣದ ಟಿಕೆಟ್ ಕಾಯ್ದಿರಿಸುವಿಕೆ, ಇ-ಸ್ಟಾಂಪ್ ಜೊತೆ ವಿದೇಶಿ ಹಣ ವಿನಿಮಯದ ಕೆಲಸವನ್ನು ಇಲ್ಲಿನ ಸಿಬ್ಬಂದಿ ಮಾಡಿಕೊಡುತ್ತಾರೆ.
ಇನ್ನೂ ಸಾಲದ ವಿಷಯಕ್ಕೆ ಬಂದರೆ ವಾಹನ ಸಾಲ, ವೈಯಕ್ತಿಕ ಸಾಲ, ಚಿನ್ನದ ಸಾಲ, ಭೂ ಖರೀದಿ ಸೇರಿದಂತೆ ಇನ್ನಿತರ ಸಾಲಗಳನ್ನು ಅತ್ಯಂತ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ನೀಡುತ್ತಾರೆ.
ಜಿಲ್ಲೆಯಲ್ಲಿಯೇ ಮೊದಲ ಬಾರಿ ಸಹಕರಿ ವಲಯಕ್ಕೆ ಕೋರ್ ಬ್ಯಾಂಕಿoಗ್ ಪದ್ಧತಿ ತಂದ ಹಿರಿಮೆ ಈ ಬ್ಯಾಂಕಿನದು. ಇದರಿಂದ ಈ ಬ್ಯಾಂಕಿನಲ್ಲಿ ಖಾತೆ ತೆರೆದ ವ್ಯಕ್ತಿ ಅದೇ ಬ್ಯಾಂಕಿನ ಯಾವುದೇ ತಾಲೂಕಿನ ಯಾವುದೇ ಶಾಖೆಯಲ್ಲಿ ವ್ಯವಹಾರ ಮಾಡಬಹುದಾದ ಅವಕಾಶ ನೀಡಲಾಗಿದೆ. ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಿಸಲಿರುವ ಯುಕೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಆನ್ ಲೈನ್ ಬ್ಯಾಂಕ್ ಆಫ್’ನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಹೂಡಿಕೆದಾರರಿಗೂ ಇಲ್ಲಿ ಠೇವಣಿಗೂ ಆಕರ್ಷಕ ಬಡ್ಡಿ ನೀಡಲಾಗುತ್ತಿದ್ದು ಸೈನಿಕ, ವಿಧವೆ, ಅಂಗವಿಕಲ ಹಾಗೂ ಸಂಘ ಸಂಸ್ಥೆಯವರು ಠೇವಣಿ ಇರಿಸಿದಲ್ಲಿ ಅವರಿಗೆ ಹೆಚ್ಚುವರಿ ಬಡ್ಡಿ ಹಾಕಿ ನೀಡಲಾಗುತ್ತದೆ.
ಎರಡು ಸಲ ಉತ್ತಮ ಸಹಕಾರಿ ಪ್ರಶಸ್ತಿಯೂ ಹೊಂದಿರುವ ಯುಕೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಕಾಗದರಹಿತ ಆಡಳಿತ ನಡೆಸುವ ಪ್ರಯತ್ನದಲ್ಲಿದೆ.
#Sponsored
Discussion about this post