ಮಲೆನಾಡು ಹಾಗೂ ಕರಾವಳಿಯನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸ ಮಳೆಯಾಗುತ್ತಿದೆ. ಒಂದೆರಡು ದಿನಗಳ ಕಾಲ ಬಿಡುವು ಪಡೆದಿದ್ದ ವರುಣ ಶುಕ್ರವಾರದಿಂದ ಮತ್ತೆ ಅಬ್ಬರಿಸುತ್ತಿದ್ದು, ಇನ್ನು ಎರಡು ದಿನ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಸಂಚಾರ ವ್ಯವಸ್ಥೆಗೆ ತೊಡಕಾಗಿದೆ.
ಮಂಗಳವಾರ ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಕುಮಟಾ ಬಳಿಯ ಗಂಜಿಗೆದ್ದೆ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಗೋಕರ್ಣ ಮೀನು ಮಾರುಕಟ್ಟೆಯಲ್ಲಿ 5 ಅಡಿ ಎತ್ತರಕ್ಕೆ ನೀರು ನಿಂತಿದೆ. ರಾಜ್ಯ ಹೆದ್ದಾರಿ 143ರ ಸಿದ್ದೇಶ್ವರದ ಬಳಿ ಮತ್ತೆ ನೀರು ನಿಂತಿದೆ.
Discussion about this post