ಹೊನ್ನಾವರ: ಅಂಗಡಿಯಲ್ಲಿ ಕೆಲಸ ಮಾಡುವ ಉಮೇಶ ನಾಯ್ಕ ಮಟ್ಕಾ ಆಡಿಸುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಉಮೇಶ ನಾಯ್ಕ ಬಳಿಯಿದ್ದ 565ರೂ ಅನ್ಯಾಯದ ಹಣವನ್ನು ಅವರು ವಶಕ್ಕೆ ಪಡೆದಿದ್ದಾರೆ.
ಆಡುಕಳ ನಾಗನಕಲ್ಲುವಿನ ಉಮೇಶ ಗಜಾನನ ನಾಯ್ಕ ಅಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಬಿಡುವಿನ ವೇಳೆ ಮಟ್ಕಾ ಹಣ ಸಂಗ್ರಹಿಸಿ ಕಮಿಷನ್ ಪಡೆಯುತ್ತಿದ್ದರು. ಈ ವಿಷಯ ಅರಿತ ಪಿಎಸ್ಐ ಭರತಕುಮಾರ ಸೋಮವಾರ ಅವರ ಮೇಲೆ ದಾಳಿ ನಡೆಸಿದರು.
ಜನರಿಂದ ಸಂಗ್ರಹಿಸಿದ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ಅವರು ವಶಕ್ಕೆ ಪಡೆದರು. ಮಟ್ಕಾ ಆಡಿಸಿದ ಕಾರಣ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.