ಡಿಜಿಟಲ್ ಇಂಡಿಯಾ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಿರುವ BSNL ತನ್ನ ಗ್ರಾಹಕರ ದಾಖಲೆಗಳನ್ನು ಸಹ ಡಿಜಿಟಲೀಕರಣ ಮಾಡುತ್ತಿದೆ. ಹೀಗಾಗಿ ಅಕ್ಟೊಬರ್ 31ರ ಒಳಗೆ ಬಿಎಸ್ಎನ್ಎಲ್’ನ ಎಲ್ಲಾ ಗ್ರಾಹಕರು ತಮ್ಮ ಆಧಾರ್ ಕಾರ್ಡ ಅಥವಾ ಡ್ರೈವಿಂಗ್ ಲೈಸನ್ಸ ಜೊತೆ BSNL ಕೇಂದ್ರಗಳಿಗೆ ಭೇಟಿ ನೀಡಬೇಕು.
ಅಲ್ಲಿ ತಮ್ಮ ಮೊಬೈಲಿಗೆ ಬರುವ OTP ಸಂಖ್ಯೆಯ ಜೊತೆ ದಾಖಲೆಯನ್ನು ಡಿಜಿಟಲೀಕರಣ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ಸಂಪೂರ್ಣ ಉಚಿತ. ಈ ಕೆಲಸ ಮಾಡದೇ ಇದ್ದಲ್ಲಿ ಬಿಎಸ್ಎನ್ಎಲ್ ಫೋನ್ ನಂ ಸ್ಥಗಿತಗೊಳ್ಳುವುದು ಖಚಿತ!
ಈಗಾಗಲೇ ಚಾಲ್ತಿಯಲ್ಲಿರುವ ಗ್ರಾಹಕರ ಗುರುತು ಖಚಿತಪಡಿಸಲು ಬಿಎಸ್ಎನ್ಎಲ್ ದೃಢೀಕರಣ ಪ್ರಕ್ರಿಯೆ ನಡೆಸುತ್ತಿದೆ. ಬಿಎನ್ಎಲ್ಎಲ್ ಫ್ರಾಂಚೈಸಿ, ಸಿಎಸ್ಸಿ ಕೇಂದ್ರ ಅಥವಾ ರಿಟೇಲರ್ ಬಳಿ ಸಹ ಈ ಕೆಲಸವನ್ನು ಮಾಡಿಕೊಳ್ಳಬಹುದು.
BSNL ಜೊತೆ ನೀವು ಅಪ್ಗ್ರೇಡ್ ಆಗಿ!
ಬಿಎಸ್ಎನ್ಎಲ್ 2G ಹಾಗೂ 3G ಸಿಮ್ ಪಡೆದಿರುವ ಗ್ರಾಹಕರು 4G ಸಿಮ್ ಪಡೆಯಬೇಕು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಹೀಗಾಗಿ `ಹಳೆಯ ಎಲ್ಲಾ ಗ್ರಾಹಕರು 4ಜಿ ಸಿಮ್’ಗಳಿಗೆ ಅಪ್ಗ್ರೇಡೇಶನ್ಗಾಗಿ ಹತ್ತಿರದ ಬಿಎಸ್ಎನ್ಎಲ್ ಕಚೇರಿಗೆ ಭೇಟಿ ಕೊಡಿ’ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ದಾಖಲೆ ಡಿಜಿಟಲೀಕರಣ ಮಾಡಿಸಿಕೊಂಡು 4G SIM ಪಡೆದವರಿಗೆ ಯಾವುದೇ ಸಮಸ್ಯೆ ಇಲ್ಲ. ಈ ಮಾಹಿತಿಯನ್ನು ನಿಮ್ಮ ಬಳಗದಲ್ಲಿ ಶೇರ್ ಮಾಡಿ. ಅಗತ್ಯವಿದ್ದವರಿಗೆ ನೆರವಾಗಿ!